ಕಸಾಘಟ್ಟದ ಎಂ. ಪಿ. ಸಿ. ಎಸ್. ಅಧ್ಯಕ್ಷ, ಉಪಾಧ್ಯಕ್ಷರಾಗಿ ಕೆ. ಕೃಷ್ಣ ಸ್ವಾಮಿ, ಕೆ. ಜಿ. ಬಸಪ್ಪ ಆಯ್ಕೆ
ದೊಡ್ಡಬಳ್ಳಾಪುರ: ತಾಲೊಕಿನ ದೊಡ್ಡಬೆಳವಂಗಲ ಹೋಬಳಿ ಕಸಾಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆ.ಕೃಷ್ಣಸ್ವಾಮಿ ಅಧ್ಯಕ್ಷರಾಗಿ ಹಾಗು ಬಸಪ್ಪ ಕೆ.ಜಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಕಸಾಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 11 ಜನ ನಿರ್ದೇಶಕರ ಪೈಕಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಎರಡೂ ಸ್ಥಾನಗಳಿಗೆ ಪೈಪೋಟಿ ಇದ್ದ ಕಾರಣಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧೆ ಮಾಡಿದ್ದ ಕೆ.ಕೃಷ್ಣಸ್ವಾಮಿ ಅವರಿಗೆ 7 ಮತಗಳು ಪ್ರಕಾಶ್ ಅವರಿಗೆ 4 ಮತಗಳು ಚಲಾವಣೆ ಯಾದರೆ, ಉಪಾಧ್ಯಕ್ಷ ಸ್ಥಾನದ ಸ್ಪರ್ಧಿ ಬಸಪ್ಪ ಕೆ.ಜಿ ಅವರಿಗೆ 6 ಮತಗಳು ಹಾಗೂ ಮತ್ತೊಬ್ಬ ಸ್ಫರ್ಧಿ ನಾರಾಯಣಮೂರ್ತಿ ಅವರಿಗೆ 5 ಮತಗಳನ್ನು ಪಡೆದರು.
ನಂತರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಸಂಘಗಳ ಸಹಾಯಕ ನಿಂಬಂಧಕರ ಕಚೇರಿಯ ವಾಣಿ ಅವರು ಆಯ್ಕೆಯಾದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಆಯ್ಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಸಾಘಟ್ಟ ಹಾಲು ಉತ್ಪಾದಕರ ಸಂಘದ ಸದಸ್ಯರು ಹಾಗು ಗ್ರಾಮಸ್ಥರು ಹಾಜರಿದ್ದರು.