ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಡಿ ಮಚ್ಛೇನ ಹಳ್ಳಿ ಗ್ರಾಮದ ಕಾಮಕ್ಕನವರಿಗೆ ವಾತ್ಸಲ್ಯ ಮನೆ
ದೊಡ್ಡಬಳ್ಳಾಪುರ:ತಾಲೂಕಿನ,ಸಾಸಲು ಹೋಬಳಿ ಅರೋಡಿ ವ್ಯಾಪ್ತಿಯ ಹನುಮಂತಪುರ ಕಾರ್ಯಕ್ಷೇತ್ರದ ಮಾಚ್ಚೇನಹಳ್ಳಿ ಗ್ರಾಮದ ಕಾಮಕ್ಕ ಎಂಬುವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ
ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಟ್ಟು ಇಂದು ಜಿಲ್ಲಾ ನಿರ್ದೇಶಕ ಉಮಾರಬ್ಬ ಹಸ್ತಾಂತರ ಮಾಡಿದರು
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಫಲಾನುಭವಿ ಆಯ್ಕೆ ಮಾಡಿ ಅವರಿಗೆ ಪ್ರತಿ ತಿಂಗಳು 1000 ಮಾಶಾಸನ ಬರುವ ರೀತಿ ಮಾಡಿಕೊಡಲಾಗಿದೆ ಇವರಿಗೆ ವಾಸಿಸಲು ಮನೆ ಇಲ್ಲದ ಕಾರಣ ಧರ್ಮಸ್ಥಳ ವತಿಯಿಂದ ಸುಮಾರು 1,15,000/- ಮೌಲ್ಯದ ಮನೆಯನ್ನು ಕಟ್ಟಿಸಿ ಕೊಡಲಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಯೋಜನಾಧಿಕಾರಿ ಸುಧಾ ಭಾಸ್ಕರ್ , ಸಾಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಬಿಲ್ ಕಲೆಕ್ಟರ್ ರಂಗಸ್ವಾಮಿ ವಲಯದ ಮೇಲ್ವಿಚಾರಕ ಸುಪ್ರೀತ್ ಕುಮಾರ್ ಜ್ಞಾನ ವಿಕಾಸ ಸಮನ್ವಧಿಕಾರಿ ಛಾಯ ಕುಮಾರಿ ಹಾಗೂ ಸೇವಾ ಪ್ರತಿನಿಧಿ ಪುಟ್ಟ ತಾಯಮ್ಮ ಹಾಗೂ ಆನಂದ್ ಹಾಗೂ ಊರಿನ ಗಣ್ಯರು ಮತ್ತು ಗ್ರಾಮಸ್ಥರು ಇದ್ದರು.