ಭಜರಂಗದಳ ನಿಷೇದ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಪ್ರತಿಭಟನೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಭಜರಂಗ ದಳ ನಿಷೇದದ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ಇಂದು ಭಜರಂಗದಳದ ಕಾರ್ಯಕರ್ತರು ನಗರದ ತಾಲ್ಲೂಕು ಕಛೇರಿ ವೃತ್ತದಲ್ಲಿ ಡಿ ಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು ಈ ಕೂಡಲೆ ಬಜರಂಗ ದಳ ನಿಷೇಧ ದ ಪ್ರಸ್ತಾಪವನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸುತ್ತಾ ನಿಷೇದದ ಪ್ರಸ್ತಾಪನೆ ಹಿಂಪಡೆಯದಿದ್ದರೆ ನಾವುಗಳು ರಾಜ್ಯಾದ್ಯಂತ ಕಾಂಗ್ರೆಸ್ ನಿಷೇಧವನ್ನು ಮಾಡಲು ಮುಂದಾಗುತ್ತೇವೆಂದರು.
ಪ್ರತಿಭಟನೆಯಲ್ಲಿ ಕೋಲಾರ ವಿಭಾಗದ ಸಂಯೋಜಕ ಜಿಲ್ಲಾ ಉಪಾದ್ಯಕ್ಷ ಮಹಾಲಿಂಗ ವಿ ಎಸ್ ಪಿ ತಾಲ್ಲೊಕು ಅದ್ಯಕ್ಷ ಮಧುಸೂದನ್ ಗೌಡ ನಗರ ಅದ್ಯಕ್ಷ ಮಾಂತೇಶ್ ಆರಾಧ್ಯ ಭಜರಂಗದಳದ ಸಂಯೋಜಕ ಗಂಗಾಧರ್ ಬಾಸ್ಕರ್ ಬಗತ್ ಮುಂತಾದವರು ಇದ್ದರು..