ಕೊನಘಟ್ಟ ಶಾಲೆಗೆ ಮರು ಜೀವ : ಜಿಲ್ಲಾಪಂಚಾಯಿತಿ ಅನುದಾನದಲ್ಲಿ ಶಾಲೆಯ ದುರಸ್ಥಿ ಕಾರ್ಯಕ್ಕೆ ಶಾಸಕರಿಂದ ಚಾಲನೆ

ದೊಡ್ಡಬಳ್ಳಾಪುರ : ಸುಮಾರು 4,90,000 ರೂಪಾಯಿಗಳ ಜಿಲ್ಲಾಪಂಚಾಯಿತಿ ಅನುದಾನದಲ್ಲಿ ಶಾಲೆಯ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ಚಾಲನೆ ನೀಡಿದರು.

ತಾಲೂಕಿನ ಕೊನಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದುರಸ್ಥಿಗಾಗಿ ಜಿಲ್ಲಾಪಂಚಾಯಿತಿ ಅನುದಾನ ದೊರೆತಿದ್ದು, ಸದರಿ ಕಾಮಗಾರಿಯ ಚಾಲನೆಯನ್ನು ಸ್ಥಳೀಯ ಶಾಸಕರು ಮುಖಂಡರೊಂದಿಗೆ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ ಸಾವಿರಾರು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿರುವ ಕೋನಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದುರಸ್ಥಿ ಕಾರ್ಯಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ದೊರೆತಿರುವುದು ಸಂತಸದ ವಿಷಯವಾಗಿದೆ. ದುರಸ್ಥಿ ಕಾಮಗಾರಿಯು ಶೀಘ್ರಗತಿಯಲ್ಲಿ ಪೂರ್ಣಗೊಂಡು ಶಾಲೆ ಮತ್ತಷ್ಟು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು .

ಈ ಸಂದರ್ಭದಲ್ಲಿ ಕೊನಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜ್ಯೋತಿ ರಮೇಶ್,ಸದಸ್ಯರಾದ ಮಂಜುನಾಥ, ಆರಾದ್ಯ, ಅಶ್ವತ್ತಪ್ಪ, ಬಾಲರಾಜ್,ಮುಖಂಡರಾದ ದೊಡ್ಡ ಬಚ್ಚಪ್ಪ, ಕೆಕೆ ಆಂಜಿನಪ್ಪ, ಶಿವಣ್ಣ, ರಾಮಣ್ಣ,ಕೆ ಎಮ್ ರಾಮಂಜಿನಪ್ಪ ಎಂಪಿಸಿಎಸ್ ನಿರ್ದೇಶಕ,ಗೋವಿಂದ್ ಸ್ವಾಮಿ ಬಿಜೆಪಿ ಮಂಡಲ ಉಪಾಧ್ಯಕ್ಷ,ನಾಗೇಶ್ ಟಿಎಪಿಎಂಸಿ ನಿರ್ದೇಶಕ, ಬೀರೇಶ್ ವಿಎಸ್ಎಸ್ಎನ್ ನಿರ್ದೇಶಕ,
ಎಸ್‌ ಡಿ ಎಮ್ ಸಿ ಅದ್ಯಕ್ಷ ಶಿವಕುಮಾರ್ ಉಪಾಧ್ಯಕ್ಷ ಬೈರಪ್ಪ ನಾಮಿನಿ ತಾಯೆಗೌಡ ಮತ್ತು ಬಸವರಾಜ್, ಪ್ರಭಾಕರ್ ಹಾಗೂ ಶಾಲಾ ಸಿಬ್ಬಂದಿ ಊರಿನ ಪ್ರಮುಖರು ಉಪಸ್ಥಿತರಿದ್ದರು.