ಕಾಂತಾಮಣಿ ಹರೀಶ್ ಗೌಡರ ಜನ್ಮ ದಿನದ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ಪೆನ್ಸಿಲ್ ವಿತರಣೆ
ದೊಡ್ಡಬಳ್ಳಾಪುರ:ಶಾಲಾ ಮಕ್ಕಳಿಗೆ ತಮ್ಮ ಕೈಲಾದ ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟ ಹಬ್ಬವನ್ನು ಆಚರಣೆ ಮಾಡಿಕೊಂಡ ಜೆ ಡಿ ಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಹಾಗು ಸಮಾಜ ಸೇವಕ ಹರೀಶ್ ಗೌಡ ರವರ ಧರ್ಮಪತ್ನಿ ಶ್ರೀಮತಿ ಕಾಂತಾಮಣಿ ರವರಿಗೆ ಶಾಲಾ ಮಕ್ಕಳು ಶುಭ ಕೋರಿದರು.
ನಗರದ ವ್ಯಾಪ್ತಿಯ ವಿದ್ಯಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಪೆನ್ ಪೆನ್ಸಿಲ್ ಇತರೆ ನೀಡುವ ಮೂಲಕ ಅರ್ಥ ಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಅವರು ಮಾತನಾಡಿ
ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವುದು ನಮ್ಮ ಧ್ಯೇಯ ಸದಾ ಜನಗಳ ನಡುವೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ವಿಶ್ವಾಸ ವ್ಯಕ್ತ ಪಡಿಸಿದರು.
.ಈ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಹರೀಶ್ ಗೌಡ ರಯ.ನಗರ ಸಭಾ ಸದಸ್ಯ ನಾಗರತ್ನ . ಜೆಡಿಎಸ್ ಮುಖಂಡ ನಾಗರಾಜ್ . ಪ್ರಭಾಕರ್ . ಕರೇನಹಳ್ಳಿ ಮಲ್ಲೇಶ್ . ಪ್ರವೀಣ್ ಶಾಂತಿನಗರ . ಪಾದ್ರಿ ಪುರ ಮಹೇಶ್ . ಉಜ್ಜನಿ ನರಸಿಂಹ ಗೌಡ .ರಾಮಕೃಷ್ಣ .ಸಂಜೀವ . ಗೌರಮ್ಮ . ಮುನಿರತ್ನಮ್ಮ .ಇತರರು ಶಾಲಾ ಶಿಕ್ಷಕರು ಮಕ್ಕಳು ಹಾಜರಿದ್ದರು.