ಅಕ್ರಮ ಅಕ್ಕಿ ಸಾಗಾಟ ಇಬ್ಬರ ಬಂಧನ

ಚಾಮರಾಜನಗರ :ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ರಾತ್ರಿ 8:30 ಗಂಟೆಯ ಸಮಯದಲ್ಲಿ ಪಿಎಸ್ಐ ಕರಿಬಸಪ್ಪ ಹಾಗೂ ಬಿಸಲಯ್ಯ ಆಹಾರ ನಿರೀಕ್ಷಕರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾಂಬಳ್ಳಿ ಗ್ರಾಮದ ರಿಂಗ್ ರಸ್ತೆಯ ಕಿನಕಹಳ್ಳಿ ಕ್ರಾಸ್ ಹತ್ತಿರ ಕೆ. ಎ- 19 ಸಿ- 4201 ಪ್ಯಾಸೆಂಜರ್ ಆಟೋವನ್ನು ತಡೆದು ತಪಾಸಣೆ ಮಾಡಲಾಗಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಅಸ್ಲಾಂ ಪಾಷ್ ಬಿನ್ ಮುಕ್ತರ್ ಪಾಷಾ, ಮತ್ತು ಮುಳ್ಳೂರು ಗ್ರಾಮ
ಸುದೀಪ್ ಬಿನ್ ಸುಧಾಕರ್ ಸಾರ್ವಜನಿಕರಿಂದ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಪ್ಯಾಸೆಂಜರ್ ಆಟೋದಲ್ಲಿ ಅಕ್ಕಿ ಸಾಗಣೆ ಮಾಡುತ್ತಿದ್ದು 7 ಚೀಲದಲ್ಲಿ 444 ಕೆಜಿ ತೂಕದ ಅಕ್ಕಿಯನ್ನು ಸಂಗ್ರಹಿಸಿದ್ದರು ಅಂದಾಜು ಬೆಲೆ 6670 ರೂಪಾಯಿಗಳು ಆಗಿದ್ದು ಇದನ್ನು ವಶಕ್ಕೆ ಪಡೆಯಲಾಗಿದೆ.

ಈ ಕಾರ್ಯಚರಣೆಯಲ್ಲಿ ಮಾಂಬಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪರಶಿವಮೂರ್ತಿ ಹೆಡ್ ಕಾನ್ಸ್ಟೇಬಲ್, ಕಿಶೋರ್ ಹೆಡ್ ಕಾನ್ಸ್ಟೇಬಲ್ ಶಿವಕುಮಾರ್, ಬಸವರಾಜ್ ಗುತ್ತಲ್ ಪೊಲೀಸ್ ಹಾಜರಿದ್ದು ಆರೋಪಿಗಳನ್ನು ಯಳಂದೂರು ನ್ಯಾಯಾಲಯಕ್ಕೆ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ.
ವರದಿ ಆರ್ ಉಮೇಶ್ ಮಲಾರಪಾಳ್ಯ