ಭಾಶೆಟ್ಟಿಹಳ್ಳಿ ವಿ. ಎಸ್. ಎಸ್. ಏನ್. ದಳ ಬಿಜೆಪಿ ಮೈತ್ರಿ ಮಡಿಲಿಗೆ
ದೊಡ್ಡಬಳ್ಳಾಪುರ:ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಲಿ ಚುನಾವಣೆ : ಜೆಡಿಎಸ್ ಬಿಜೆಪಿ ಪಕ್ಷಗಳ ಮೈತ್ರಿಗೆ ಒಲಿದ ಜಯ
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಲಿಗೆ ನೆಡೆದ 11 ಸ್ಥಾನಗಳಿಗೆ ಚುನಾವಣೆಯಲ್ಲಿ 31 ಅಭ್ಯರ್ಥಿಗಳು ಸ್ಪರ್ದಿಸಿದ್ದು ಏನ್ ಡಿ ಎ ಬೆಂಬಲಿತ ಅಭ್ಯರ್ಥಿಗಳು 9 ಸ್ಥಾನಗಳನ್ನು ಪಡೆದು ಬಹುಮತದ ಜಯಗಳಿಸಿದ್ದಾರೆ.
ಸಹಕಾರ ಸಂಘಗಳ ನಿಯಮಗಳ ಪ್ರಕಾರ ಮತಕ್ಷೇತ್ರದಿಂದ ವಿದ್ಯುಕ್ತವಾಗಿ ಸಾಲಗಾರರ ಕ್ಷೇತ್ರದಿಂದ ಬಿ.ಕೆ.ಆನಂದ ಕುಮಾರ್(143),ನಾರಾಯಣಸ್ವಾಮಿ(134),ಕೆ ಎಂ ಅಂಬರೀಷ್ (127),ಸಿ.ನಾರಾಯಣಸ್ವಾಮಿ(119),ವಿಶ್ವನಾಥ(93),ಸಂಜೀವಪ್ಪ(96),ಶಿವಕುಮಾರ್(113)ಕೆಂಪಣ್ಣ (137)ಬಿ.ರಮೇಶ್(118) ಆನಂದಮ್ಮ(134),ಪವಿತ್ರ(86) ಮತಗಳನ್ನು ಪಡೆಯುವ ಮೂಲಕ ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ (ನಿ.)ಕ್ಕೆ ನೂತನವಾಗಿ `ಚುನಾಯಿತರಾಗಿದ್ದಾರೆಂದು ರಿಟರ್ನಿಂಗ್ ಅಧಿಕಾರಿ ಕೆ ಏನ್ ನಾಗಮಣಿ ಘೋಷಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನೂತನವಾಗಿ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಪುಷ್ಪಮಾಲೆ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಈ ಕುರಿತು ಸ್ಥಳಿಯ ಬಿಜೆಪಿ ಮುಖಂಡ ಪ್ರೇಮ್ ಕುಮಾರ್ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಸಹಕಾರ ಸಂಘಗಳು ಅಳಿವಿನ ಅಂಚಿನಲ್ಲಿವೆ, ಸಹಕಾರ ಸಂಘಗಳನ್ನು ಸಮೃದ್ಧಗೊಳಿಸಲು ಚುನಾಯಿತ ಪ್ರತಿನಿಧಿಗಳು ಸಾಕಷ್ಟು ಶ್ರಮವಹಿಸಬೇಕಿದೆ. ಸರ್ಕಾರದಿಂದ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಕಟ್ಟಡವನ್ನು ನಿರ್ಮಿಸುವ ಯೋಜನೆ ಇದ್ದು ಆ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳು ಶ್ರಮಿಸಲಿದ್ದಾರೆ ಎಂದರು .
ಒಂದು ಚುನಾವಣೆ ನಡೆಸಲು ಕನಿಷ್ಠ 5 ಲಕ್ಷ ವೆಚ್ಚವಾಗುತ್ತದೆ ಎಂದು ಮಾಜಿ ಅಧ್ಯಕ್ಷರು ತಿಳಿಸಿದ್ದರು, ಸಹಕಾರ ಸಂಘಗಳ ಚುನಾವಣೆಗೆ 5 ಲಕ್ಷ ರೂಪಾಯಿ ಖರ್ಚು ಮಾಡಿದರೆ ರೈತರ ಹಣ ಪೋಲಾಗುವುದಿಲ್ಲವೇ ಆ ಕಾರಣಕ್ಕಾಗಿ ಕಳೆದ 30 ವರ್ಷಗಳಿಂದ ಸಹಕಾರ ಸಂಘವು ಹಾಳಾಗಬಾರದು , ಸಂಘವು ಉಳಿಯಲಿ ಎಂಬ ಉದ್ದೇಶದಿಂದ ಯಾವುದೇ ಚುನಾವಣೆ ನಡೆಸದೇ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಂಡು ಬರುತ್ತಿದ್ದೆವು ಆದರೆ ಈ ಬಾರಿ ಚುನಾವಣೆಯಲ್ಲಿ ಕೆಲ ಕಿಡಿಗೇಡಿಗಳು ಕೇವಲ 11 ಸ್ಥಾನಗಳಿಗೆ 63 ಅರ್ಜಿಗಳನ್ನು ಹಾಕಿದ್ದ ಕಾರಣ ಕೆಲವರನ್ನು ಮನವೊಲಿಸಿ ಅರ್ಜಿಗಳನ್ನು ಹಿಂಪಡೆಯುವಂತೆ ಮಾಡಿದ್ದೇವೆ ಕೊನೆಯಲ್ಲಿ 31 ಆಕಾಂಕ್ಷಿಗಳ ನಡುವೆ ನಡೆದ ಚುನಾವಣೆಯಲ್ಲಿ ನಮ್ಮ ಎನ್ ಡಿಎ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಗಳಾಗಿರುವುದು ಸಂತಸ ತಂದಿದೆ ಎಂದರು.
ಏನ್ ಡಿ ಎ ಬೆಂಬಲಿತ ಅಭ್ಯರ್ಥಿ ಕೆ ಎಂ ಅಂಬರೀಶ್ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಏನ್ ಡಿ ಎ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದು 9 ಸ್ಥಾನಗಳಲ್ಲಿ ಜಯ ಗಳಿಸಿದ್ದೇವೆ, ಈ ಹಿಂದೆ ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯು ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಕೈಗೊಂಡಿಲ್ಲ ಕನಿಷ್ಠ ಸಂಘದ ಕಟ್ಟಡಕ್ಕೆ ಬಣ್ಣ ಬಳಿಯುವ ಕಾರ್ಯವನ್ನು ಕೂಡ ಮಾಡಲು ಅವರಿಂದ ಸಾಧ್ಯವಾಗಿಲ್ಲ, ಈ ಬಾರಿ ಯುವಕರಿಗೆ ಏನ್ ಡಿ ಎ ಮೈತ್ರಿ ಅವಕಾಶ ಕಲ್ಪಿಸಿದ್ದು ಹಿರಿಯರ ಮಾರ್ಗದರ್ಶನದೊಂದಿಗೆ ಸ್ಥಳೀಯ ಸಹಕಾರ ಸಂಘದ ಉನ್ನತಿಕರಣಕ್ಕೆ ಶ್ರಮಿಸಲಾಗುವುದು ಎಂದರು.
ಬಾಶೆಟ್ಟೆಹಳ್ಳಿ ಪಟ್ಟಣ ಪಂಚಾಯಿತಿಯಿಂದ ಕೇವಲ 4-5 ಕಿಲೋ ಮೀಟರ್ ದೂರದಲ್ಲಿರುವ ಸಹಕಾರಿ ಸಂಘಗಳ ಕಟ್ಟಡಗಳು ಉತ್ತಮ ವೆಚ್ಚದಲ್ಲಿ ಉನ್ನತ ಶ್ರೇಣಿಯಲ್ಲಿ ನಿರ್ಮಾಣಗೊಂಡಿವೆ, ಆದರೆ ನಮ್ಮ ಸಹಕಾರಿ ಸಂಘದ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿ ಇರುವುದು ಶೋಚನಿಯ, ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ವತಿಯಿಂದ ಬ್ಯಾಂಕ್ ಸ್ಥಾಪಿಸುವ ಮೂಲಕ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ , ಈ ಬಾರಿಯ ಚುನಾಯಿತ ಪ್ರತಿನಿಧಿಗಳಾಗಿ ಯುವಕರು ಪ್ರಜ್ಞಾವಂತರು ಆಯ್ಕೆಯಾಗಿದ್ದು ಸಹಕಾರಿ ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸುವ ಆಶಯವಿದೆ ಎಂದರು.
ಈ ಸಂದರ್ಭದಲ್ಲಿ ಎನ್ ಡಿ ಎ ಮುಖಂಡರಾದ ಪ್ರೇಮ್ ಕುಮಾರ್ ,ಕೃಷ್ಣಪ್ಪ ,ಮುನಿಚಂದ್ರ ಸುರೇಶ್ ಬಾಬು, ಮುನಿಶಂಕರ್ ಸೇರಿದಂತೆ ಬಾಶೆಟ್ಟಿಹಳ್ಳಿ ವ್ಯವಸಾಯ ಸಹಕಾರ ಸಂಘಕ್ಕೆ ಸೇರಿದ ಎಲ್ಲಾ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.