ಇಂದು ಗೌರಿಬಿದನೂರು ತಾಲ್ಲೂಕು ಕೇಬಲ್ ಟ.ವಿ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಥಮ ವಾರ್ಷಿಕೋತ್ಸವ

ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಕೇಬಲ್ ಟಿ.ವಿ.ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ ಒಂದನೇ(1)ವಾರ್ಷಿಕೋತ್ಸವವನ್ನು ನಗರದ ವಿ.ವಿ ಪುರಂ ನಲ್ಲಿರುವ ಡಾ.ಹೆಚ್‌.ಎನ್.ಕಲಾಭವನದಲ್ಲಿ ಇಂದು ದಿನಾಂಕ (19-1-2025)ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಗೌರಿಬಿದನೂರು ಶಾಸಕರಾದ ಕೆ.ಎಚ್.ಪುಟ್ಟಸ್ವಾಮಿಗೌಡ ರವರು ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕೇಬಲ್ ಟಿ.ವಿ.ಆಪರೇಟರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಪ್ಯಾಟ್ರಿಕ್ ರಾಜು,ಪ್ರಧಾನ ಕಾರ್ಯದರ್ಶಿಗಳಾದ ರಾಮ್ ಪ್ರಸಾದ್ ಗೌಡ,ಗೌರಿಬಿದನೂರು ತಾಲ್ಲೂಕು ತಹಶಿಲ್ದಾರ್ ಹಾಗು ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ಮಹೇಶ್ ಎಸ್.ಪತ್ರಿ,ಆರಕ್ಷಕ ವೃತ್ತ ನಿರೀಕ್ಷರಾದ ಕೆ.ಪಿ.ಸತ್ಯನಾರಾಯಣ ರವರು ಹಾಗು ಗೌರಿಬಿದನೂರು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಎಂ ಆರ್.ಪರಮೇಶ್ವರಪ್ಪ,ಮತ್ತು ವರಪ್ರಸಾದ್ ರೆಡ್ಡಿ ಸೂಕ್ಷ್ಮ ಸಣ್ಣ ಮತ್ತು ಮದ್ಯಮ ಉದ್ಯಮಗಳ ಮತ್ತು ಕಾರ್ಮಿಕ ಉದ್ಯೋಗದ ರಾಜ್ಯ ಸಚಿವರ ಹೆಚ್ಚುವರಿ ಆಪ್ತ ಕಾರ್ಯದರ್ಶಿಗಳು (ಭಾರತ ಸರ್ಕಾರ)ಇನ್ನೂ ಮುಂತಾದ ಗಣ್ಯರು ಭಾಗವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರಿಬಿದನೂರು ತಾಲ್ಲೂಕು ಕೇಬಲ್ ಟಿ.ವಿ.ಕೇಬಲ್ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಎಂ.ಪಿ.ಸತ್ಯನಾರಾಯಣ ರವರು ವಹಿಸಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದ ಅನೇಕ ಜಿಲ್ಲೆ ಹಾಗು ತಾಲ್ಲೂಕು ಗಳಿಂದ ಕೇಬಲ್ ಆಪರೇಟರ್ ಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘದ ಅಧ್ಯಕ್ಷರಾದ ಎಂ.ಪಿ ಸತ್ಯನಾರಾಯಣ ಹಾಗು ಸಂಘದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಕೋರಿದ್ದಾರೆ.