ಜಿಲ್ಲಾ ಹಿತ ರಕ್ಷಣಾ ಹೋರಾಟ ಸಮಿತಿಯಿಂದ ಇರಸವಾಡಿ ಸಿದ್ದಪ್ಪಾಜಿಗೆ ಸನ್ಮಾನ

ಚಾಮರಾಜನಗರ: ಜ.18:ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಕ್ರಾಂತಿ ಸೇನೆ(ಮಾಧ್ಯಮ ವಿಭಾಗ) ರಾಜ್ಯಾಧ್ಯಕ್ಷರಾದ ಇರಸವಾಡಿ ಸಿದ್ದಪ್ಪಾಜಿ ಅವರಿಗೆ ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿ ವತಿಯಿಂದ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಸಮಿತಿಯ ಅಧ್ಯಕ್ಷರಾದ ಆಲೂರು ಮಲ್ಲು ಮಾತನಾಡಿ, ಇರಸವಾಡಿ ಸಿದ್ದಪ್ಪಾಜಿಯವರು ತುಂಬಾ ಜನಾನುರಾಗಿಯಾಗಿ ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಇದೇ ರೀತಿ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಲಿ ಎಂದು ಆಶಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ಮಾತನಾಡಿ, ಇನ್ನು ಹೆಚ್ಚಿನ ಉತ್ತಮ ಸುದ್ದಿಗಳನ್ನು ಬಿತ್ತರಿಸುವ ಮೂಲಕ ರಾಷ್ಟ್ರದಾದ್ಯಂತ ತಮ್ಮ ಕಾರ್ಯ ವೈಕರಿ ಹೆಚ್ಚಾಗಲಿ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಗಜ ಪಡೆ ಜಿಲ್ಲಾ ಅಧ್ಯಕ್ಷ ಜಿ.ಎಂ.ಶಂಕರ್, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರಾದ ಕೋಡಿಪುರ ಮಾದೇಶ್, ಸಿ.ಎಚ್ ರಂಗಸ್ವಾಮಿ,, ಹೊಂಗನೂರು ನಂಜುಂಡಸ್ವಾಮಿ, ಹೆಚ್ .ಆರ್ ಸುನಿಲ್, ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಎಚ್.ಎಂ. ಶಿವಣ್ಣ ಮಂಗಲ ಹೊಸೂರು ಸೇರಿದಂತೆ ಇತರರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ