ಸನಾತನ ಹಬ್ಬಗಳ ಆಚರಣಾ ಸಮಿತಿ ಯಿಂದ ಸಂಕ್ರಾಂತಿ ಆಚರಣೆ

ದೊಡ್ಡಬಳ್ಳಾಪುರ:ಸನಾತನ ಹಬ್ಬಗಳ ಆಚರಣಾ ಸಮಿತಿ ಮತ್ತು ಗೋಮಾತಾ ಫೌಂಡೇಷನ್ ವತಿಯಿಂದ ದೊಡ್ಡಬಳ್ಳಾಪುರ ನಗರದ ನೆಲದಾಂಜನೇಯ ದೇವಾಲಯದ ಅಂಗಳದಲ್ಲಿ 2025ರ ಕ್ಯಾಲೆಂಡರ್ ಮೊದಲ ಸಂಕ್ರಾಂತಿ ಹಬ್ಬವನ್ನು ಅಚರಣೆ ಮಾಡಲಾಯಿತು.

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಸಾರ್ವಜನಿಕ ಗೋ ಮಾತೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಹಿಂದೂ ಸಾಂಪ್ರಾದಾಯಿಕ ಹಬ್ಬಗಳಲ್ಲಿ ಒಂದಾದ ಸುಗ್ಗಿ ಸಂಕ್ರಾಂತಿ ಸಂಭ್ರಮವಾಗಿ ವಿವಿದ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅದರಲ್ಲಿ ಮಕ್ಕಳಿಂದ ಮಡಿಕೆ ಹೊಡೆಯುವುದು ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಥಳೀಯ ನಾಟ್ಯ ಕಲಾ ಸಂಘದಿಂದ ಭರತನಾಟ್ಯ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.

ಸಾರ್ವಜನಿಕರು ಗೋ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ನೂರಾರು ಭಕ್ತರು ಭಕ್ತಿಯಿಂದ ಸೇವೆಯಲ್ಲಿ ಪಾಲ್ಗೊಂಡರು.

ಈ ಕಾರ್ಯಕ್ರಮದ ಆಯೋಜಕರುಗಳಾದ ಘನಶ್ಯಾಮ್, ಕಿರಣ್ .ಭಾಸ್ಕರ್, ಉಮಾಮಹೇಶ್ವರಿ,ಭವ್ಯ ಮೋಹನ್ ಯಶೋಧ ರಘುನಾಥ್ , ಹೋಟೆಲ್ ಮೋಹನ್ ಸೇರಿದಂತೆ ಹಲವು ಭಕ್ತಾದಿಗಳು ಬಾಗವಹಿಸಿದ್ದರು.