ಕೆಸ್ತೂರು ಗ್ರಾಮದ ಎಂ.ಎಲ್.ಜಿ.ಕಿರಿಯ ಪ್ರಾಥಮಿಕ ಶಾಲೆಯ 24 ನೇ ವಾರ್ಷಿಕೋತ್ಸವ

ಯಳಂದೂರು. ಮಕ್ಕಳ ಬಗ್ಗೆ ಪೋಷಕರಿಗೆ ಇರುವಷ್ಟೇ ಕಾಳಜಿ ಶಿಕ್ಷಕರಿಗೂ ಸಹ ಇರುತ್ತದೆ ಎಂದು ಬಿ. ಓ. ಮಾರಯ್ಯ ತಿಳಿಸಿದರು.

ತಾಲೂಕಿನ ಕೆಸ್ತೂರು ಗ್ರಾಮದ ಎಂ.ಎಲ್.ಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 24ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಶ್ರೀ ತೊಂಟದಾರ್ಯ ಸ್ವಾಮಿ ಗಳವರ ದಿವ್ಯ ಸಾನಿಧ್ಯದಲ್ಲಿ ನಡೆಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥಾಪಕ ಕಾರ್ಯದರ್ಶಿಗಳಾದ ಎಲ್.ಲಿಂಗರಾಜು ರವರು ವಹಿಸಿದ್ದರು.

ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರಯ್ಯ ರವರು ಉದ್ಘಾಟನೆ ನಡೆಸಿ ಮಾತನಾಡಿ ಮಕ್ಕಳ ಬಗ್ಗೆ ಪೋಷಕರಿಗೆ ಇರುವಷ್ಟೇ ಶಿಕ್ಷಕರಿಗೂ ಕಾಳಜಿ ಇರುತ್ತದೆ,ವಿದ್ಯಾರ್ಥಿಗಳು ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳುವುದು ಉತ್ತಮ ಕೆಲಸ,

ಚಿಕ್ಕಂದಿನಿಂದಲೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ಬುದ್ಧಿಶಕ್ತಿ, ಧೈರ್ಯ ಹೆಚ್ಚಿಸಿ ಭಯ ಹೋಗಲಾಡಿಸಬಹುದು, ಪ್ರತಿ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಮನರಂಜನೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗುವುದಿಲ್ಲ ಇದಕ್ಕೆ ಪೋಷಕರು ಸಹ ಸಹಕರಿಸಬೇಕಾಗಿದೆ ಎಂದು ಹೇಳಿದರು.

ಬಿ.ಆರ್. ಸಿ.ನಂಜುಂಡಯ್ಯ ರವರು ಮಾತನಾಡಿ ಮಕ್ಕಳು ಹೆಚ್ಚಿನ ಸಮಯ ಶಿಕ್ಷಕ ರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ, ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬೇಕು,ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಡ್ಯ ಹಾಗೂ ಆರೋಗ್ಯ ಹೊಂದುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಇಒ ಶಾಂತರಾಜು, ಪ್ರಭಾರ ಇಸಿಓ ಬಸವಣ್ಣ, ಸಿಆರ್‌ಪಿ ಮಂಜುನಾಥ್, ಕೆಸ್ತೂರು ಗ್ರಾಮದ ನಾಡಗೌಡರಾದ ಮಹದೇವಸ್ವಾಮಿ, ಸಂಸ್ಥೆಯ ಹಿತೈಷಿ ರವಿಶಂಕರ್, ಶಿಕ್ಷಕರಾದ ನಂಜಯ್ಯ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ