ನಾ. ಡಿಸೋಜ ರವರಿಗೆ ಕನ್ನಡ ಜಾಗೃತ ಪರಿಷತ್ ವತಿಯಿಂದ ನುಡಿನಮನ
ದೊಡ್ಡಬಳ್ಳಾಪುರ: ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿ ನಾ. ಡಿಸೋಜ ರವರಿಗೆ ಕನ್ನಡ ಜಾಗೃತ ಪರಿಷತ್ತು ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.
ನುಡಿ ನಮನ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ತ. ನ. ಪ್ರಭುದೇವ್, ಪತ್ರ ಕರ್ತರಾದ ಡಿ. ಶ್ರೀಕಾಂತ್, ಕೆ. ಆರ್. ರವಿಕಿರಣ್, ಕನ್ನಡ ಪಕ್ಷದ ಸಂಜೀವ್ ನಾಯಕ್, ಮುನಿಪಾಪಯ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ. ಗೋವಿಂದರಾಜು, ಕ. ಸಾ. ಪ. ನಿಕಟಪೂರ್ವ ಅಧ್ಯಕ್ಷರಾದ ಪ್ರಮೀಳಾ ಮಹದೇವ್, ಪ್ರಗತಿ ಪರ ಚಿಂತಕರಾದ ಗುರು ರಾಜಪ್ಪ, ವಿ. ಪರಮೇಶ್, ವೆಂಕಟರಾಜು, ಜೈ ಶಂಕರ್, ಕನ್ನಡ ಜಾಗೃತ ಪರಿಷತ್ ಪ್ರದಾನ ಕಾರ್ಯದರ್ಶಿ ಡಿ. ಪಿ. ಆಂಜನೇಯ, ಸೂರಿ, ಆನಂದ್, ಕೃಷ್ಣಪ್ಪ, ಚಂದ್ರಣ್ಣ ,ಮುಂತಾದವರು ಭಾಗವಹಿಸಿದ್ದರು.