ಕತ್ತಲಿಂದ ಬೆಳಕಿನೆಡೆಗೆ ನಡೆಸಿದವರು ಸಾವಿತ್ರಿ ಬಾ ಪುಲೆ — ಬಿಇಒ ಮಾರಯ್ಯ
ಯಳಂದೂರು : ದೇಶದ ಜನರಿಗೆ ವಿದ್ಯೆಯಿಲ್ಲದೆ ಅಜ್ಞಾನದಲ್ಲಿ ಮುಳುಗಿದ್ದ ಎಲ್ಲಾ ಜನರಿಗೆ ವಿದ್ಯೆನೀಡಿ ಕತ್ತಲಿನಿಂದ ಬೆಳೆಕಿನೆಡೆಗೆ ನಡೆಸಿದವರು ಸಾವಿತ್ರಿ ಬಾಪುಲೆ ಯವರು ಎಂದು ಬಿಇಒ ಮಾರಯ್ಯ ಅಭಿಪ್ರಾಯ ಪಟ್ಟರು
ಪಟ್ಟಣದ ಅಂಬೇಡ್ಕರ್ ಪುತ್ಥಳಿಯ ಆವರಣದಲ್ಲಿ ಸಾವಿತ್ರಿಬಾಯಿಪುಲೆ ರಾಷ್ಟ್ರೀಯ ಶಿಕ್ಷಕಿಯರ ಪೆಡರೇಷನ್ ನವದೆಹಲಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಯಳಂದೂರು ತಾಲ್ಲೂಕು ಘಟಕವು ಆಯೋಜಿಸಿದ್ದ ಮಾತೆ ಸಾವಿತ್ರಿಬಾಯಿ ಪುಲೆಯವರ 194 ನೇ ಜನ್ಮ ದಿನಾಚರಣೆಯಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಪುಲೆ ಯವರ ಜನ್ಮ ದಿನಾಚರಣೆಯನ್ನು ಇಂದು ರಾಷ್ಟ್ರದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಬಾಲಕಿಯರಿಗೆ ಹಾಗೂ ಮಹಿಳೆಯರಿಗೆ ವಿದ್ಯಾಭ್ಯಾಸವನ್ನು ನಿರಾಕರಿಸಿದ್ದ ಅಂದಿನ ಸಾಮಾಜಿಕ ಸನ್ನವೇಶದಲ್ಲಿ ಸಾವಿತ್ರಿಬಾಯಿ ಪುಲೆ ಬಾಲಕಿಯರಿಗೆ ಶಿಕ್ಷಣ ನೀಡಿದ್ದು ಒಂದು ದೊಡ್ಡ ಸಾಹಸವೇ ಆಗಿದೆ.
ಅವರು ಶಾಲೆಗೆ ಪಾಠ ಮಾಡಲು ದಾರಿಯಲ್ಲಿ ಹೋಗುವಾಗ ಪಟ್ಟಭದ್ರಹಿತಶಕ್ತಿಗಳು ಅವರಿಗೆ ಸಗಣಿ ನೀರನ್ನು ಎರಚಿ ಅವಮಾನ ಮಾಡಿದರು ಮತ್ತು ಕಲ್ಲಿನಿಂದ ಒಡೆದು ನೋವು ಮಾಡಿದರು. ಇಂತಹ ಸನ್ನಿವೇಶದಲ್ಲೂ ಸಾವಿತ್ರಿಬಾಯಿ ಪುಲೆಯವರು ಛಲಬಿಡದೆ ಬಾಲಕಿಯರಿಗೆ ಶಿಕ್ಷಣ ನೀಡಿದರು ಎಂದು ಬಣ್ಣಿಸಿದರು.
ಬಿ ಆರ್ ಸಿ ಎಸ್ ನಂಜುಂಡಯ್ಯ ಮಾತಾನಾಡಿ. ಗುಲಾಮಗಿರಿಯಲ್ಲಿ ನಲುಗುತ್ತಿದ್ದ ಈ ಸಮಾಜದಲ್ಲಿ ಶಿಕ್ಷಣ ನೀಡಿ ಸ್ವಾಭಿಮಾನ ಮತ್ತು ಸ್ವಾವಲಂಬಿಯನ್ನಾಗಿ ಮಾಡಿದವರು ಸಾವಿತ್ರಿಬಾಯಿಪುಲೆಯವರು ಎಂದು ಅಭಿಪ್ರಾಯಪಟ್ಟರು.
ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘವು ಉತ್ತಮವಾದ ಕೆಲಸ ಕಾರ್ಯಗಳಿಂದ ಕಾರ್ಯನಿರ್ವಹಿಸುತ್ತಿದೆ ನಿಮ್ಮ ಸಂಘವು ವ್ಯಾಪಕವಾಗಿ ಹರಡಿಕೊಳ್ಳಲಿ ಎಂದು ಸಂಘಕ್ಕೆ ಶುಭಕೋರಿದರು
ನಂತರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್ ಎಸ್ ಪುಷ್ಪಲತ ಮಾತನಾಡಿ. ಶಿಕ್ಷಣವು ಕೇವಲ ಒಂದುವರ್ಗದ ಪುರುಷರಿಗಷ್ಟೇ ಮೀಸಲಾಗಿದ್ದ ಸಂದರ್ಭದಲ್ಲಿ ಸಾವಿತ್ರಿಬಾಯಿ ಪುಲೆಯವರು ಯಾರಿಗೂ ಅಂಜದೆ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು
ಮೂಲಕ ಭಾರತದೇಶದಲ್ಲಿ ಹೊಸ ಇತಿಹಾಸಬರೆದರು ಎಂದು ಬಣ್ಣಿಸಿದರು.
ಈ ಸಂಧರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಎಸ್ ನಂಜುಂಡ್ಯ, ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಭವಾನಿದೇವಿ, ತಾಲೂಕು ಘಟಕದ ಅಧ್ಯಕ್ಷೆ ಗಣಿಗನೂರು ಮಹದೇವಮ್ಮ, ಟಿಪಿಇಒ ಶಾಂತರಾಜು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಹೇಶ್, ರಾಜ್ಯಪರಿಷತ್ ಸದಸ್ಯ ವೈ.ಎಂ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೊನ್ನೂರು ಸೋಮಣ್ಣ, ಸಿ ಆರ್ ಪಿ ರೇಚಣ್ಣ, ಶಿಕ್ಷಕರಾದ ಶಂಕರ್, ಜಯಶಂಕರ್, ಹಾಗೂ ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿದರು
ವರದಿ ಆರ್ ಉಮೇಶ್ ಮಲಾರಪಾಳ್ಯ