ಹಾಡೋನಹಳ್ಳಿ ಅಪ್ಪಯ್ಯಣ್ಣನವರ ಮನೆಗೆ ಸಂಸದ ಸುಧಾಕರ್ ಬೇಟಿ
ದೊಡ್ಡಬಳ್ಳಾಪುರ: ಇತ್ತೀಚಿಗೆ ನಿಧನರಾದ ದೊಡ್ಡಬಳ್ಳಾಪುರ ಜೆಡಿಎಸ್ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣವರ ನಿವಾಸಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ., ಕೆ. ಸುಧಾಕರ್ ಬೇಟಿ ನೀಡಿ ಅಪ್ಪಯ್ಯಣ್ಣ ನವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಡಾ, ಸುಧಾಕರ್ ಮಾತನಾಡಿ ನಾಲ್ಕು ದಶಕಗಳ ಕಾಲ ತಳ ಮಟ್ಟದಿಂದ ರಾಜಕಾರಣ ಮಾಡಿದ ಅಪ್ಪಯ್ಯಣ್ಣನವರು ಹಾಡೋನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರರಾಗಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಬಮುಲ್ ಅಧ್ಯಕ್ಷ, ಲಯನ್ಸ್ ಕ್ಲಬ್ ಅಧ್ಯಕ್ಷ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಸ್ಥಾನ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ತಾಲೂಕು ಹಾಗೂ ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ಬೆಳೆಸಿಕೊಂಡಿದ್ದರು. ದೊಡ್ಡಬಳ್ಳಾಪುರ ರಾಜಕಾರಣಕ್ಕೆ ಅಪ್ಪಯ್ಯಣ್ಣನವರ ಮಾರ್ಗದರ್ಶನ ಪೂರಕವಾಗಿತ್ತು. ಅವರ ಅಗಲಿಕೆ ನನಗೆ ನೋವು ತಂದಿದೆ. ಇಂತಹ ಹಿರಿಯರ ಆತ್ಮಕ್ಕೆ ಸದ್ಗತಿ ಸಿಗಲಿ. ಅಪ್ಪಯ್ಯಣ್ಣನವರ ಕುಟುಂಬ ವರ್ಗಕ್ಕೂ ಹಾಗೂ ಅವರ ಅಪಾರ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಮುನೇಗೌಡ, ಬಿಜೆಪಿ ಮುಖಂಡ ಕೆ. ಎಂ. ಹನುಮಂತರಾಯಪ್ಪ, ದಳದ ಮುಖಂಡರಾದ ಹುಸ್ಕೂರ್ ಆನಂದ್, ವಕೀಲ ಮುರುಳಿದರ್, ಮುನೇಗೌಡ, ಸತೀಶ, ಜೋನ ಮಲ್ಲಿಕಾರ್ಜುನ್, ಕುರುವಿಗೆರೆ ಮುರುಳಿ, ಬೀಡಿಕೆರೆ ಗೌರೀಶ್, ಪುಟ್ಟಬಸವರಾಜ್, ಪುರುಷೋತ್ತಮ್ ಹಾಜರಿದ್ದರು.