ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಹೊಸ ವರ್ಷ ಆಚರಣೆ
ದೊಡ್ಡಬಳ್ಳಾಪುರ:_2025ನೇ ಹೊಸ ವರ್ಷದ ಪ್ರಯುಕ್ತ ಸೂರ್ಯ ಪಧವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷರಾದ ಕೆ ಬಿ ಮುದ್ದಪ್ಪ ರವರು ವಿದ್ಯಾರ್ಥಿಗಳು ಕಳೆದ ವರ್ಷದ ಕಹಿನೇನಪು ಮರೆತು ಹೊಸ ವರ್ಷದಲ್ಲಿ ಹೊಸ ಹೊಸ ಬಯಕೆಗಳಯನ್ನು ಪೂರೈಸಲು ಪ್ರಯತ್ನಿಸ ಬೇಕು ಎಂದು ಹೇಳಿದರು ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಇಂದು ಒಂದು ಪ್ರತಿಜ್ಞೆ ಮಾಡಬೇಕು ಏನೆಂದರೆ ನಿಮ್ಮಲ್ಲಿರುವ ಯಾವುದಾದರೂ ಒಂದು ಕೆಟ್ಟ ಗುಣಗಳನ್ನು ಬಿಡುತ್ತೇನೆ ಎಂದು ಹಾಗಾದಾಗ ಪ್ರತಿವರ್ಷ ಒಂದೊಂದು ಕೆಟ್ಟ ಗುಣಗಳನ್ನು ಬಿಡುತ್ತಾ ಹೊದಂತೆ ಮನುಷ್ಯ ಪರಿಪಕ್ವತೆ ಹೊಂದುತ್ತಾನೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪುನೀತ್ ಟಿ ಉಮ್ಮೆಮುಸ್ಕಾನ್ ಕೆ ವಿ. ಸೌಮ್ಯ ಶ್ರೀ. ಬೊದಕೇತರ ಸಿಬ್ಬಂದಿಗಳಾದ ಮಿಥುನ್ ಗಂಗಾಧರ್ ಶಾರದಾ ಭಾಗವಹಿಸಿದ್ದರು.