ಶ್ರದ್ದಾ ಭಕ್ತಿ ಸಂಭ್ರಮಗಳಿಂದ ಕ್ರಿಸ್ ಮಸ್ ಹಬ್ಬ ಆಚರಣೆ

ದೊಡ್ಡಬಳ್ಳಾಪುರ:ಶಾಂತಿದೂತ ಯೇಸುಕ್ರಿಸ್ತನ ಜನ್ಮದಿನದ ಕ್ರಿಸ್ ಮಸ್ ಹಬ್ಬವನ್ನು ತಾಲೂಕಿನ ಹಲವೆಡೆ ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು.
ಮಂಗಳವಾರ ಮದ್ಯ ರಾತ್ರಿಯಿಂದಲೇ ಬಲಿ ಪೂಜೆಯೊಂದಿಗೆ ಪ್ರಾರಂಭವಾಗಿ ಚರ್ಚ್ಗಳಲ್ಲಿ ವಿಶೇಷ ನಡೆದವು. ಕ್ರೈಸ್ತ ಸಮುದಾಯದ ಬಂದುಗಳು ತಮ್ಮ ಕುಟುಂಬ ಸದಸ್ಯರೊಡನೆ ಚರ್ಚ್ ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಬಂದು ಬಾಂದವರ ಜೊತೆ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.ಪ್ರವಾಸಿ ಮಂದಿರ ವೃತ್ತದ ಬಳಿ ಇರುವ ಸಂತ ಪೇತ್ರರ ಕ್ಯಾತೋಲಿಕ್ ಚರ್ಚ್ ನಲ್ಲಿ ಕ್ರಿಸ್ ಮಸ್ ಅಂಗವಾಗಿ ಮಂಗಳವಾರ ರಾತ್ರಿ ಕ್ಯಾರೋಲ್ ಗೀತೆಗಳು, ಬಲಿಪೂಜೆ, ಪ್ರಾರ್ಥನೆಗಳು ನಡೆದವು. ಈ ಸಂದರ್ಭದಲ್ಲಿ ಪ್ರವಚನ ನೀಡಿದ ಚರ್ಚ್ ನ ಫಾದರ್ ಅಂತೋನಿ ಡಿಸೋಜ, ಮಾತನಾಡಿ ಸಂತ ಯೇಸು ಪ್ರಭುವಿನ ಜನ್ಮದಿನದ ಅಂಗವಾಗಿ ಜಗತ್ತಿನೆಲ್ಲೆಡೆ ಕ್ರಿಸ್ ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ದೇವರು ಮಾನವನನ್ನು ಶಾಂತಿ, ರಕ್ಷಣೆ ದೃಷ್ಟಿಯಿಂದ ಸೃಷ್ಟಿಸಿದ. ಆದರೆ ಮಾನವನು ಸೃಷ್ಟಿಕರ್ತನ ವಿರುದ್ಧ ನಿಂತಾಗ ದೇವರು ಪ್ರವಾದಿಗಳನ್ನು ಪ್ರಪಂಚಕ್ಕೆ ಕಳುಹಿಸುತ್ತಾನೆ. ಇದರ ಉದ್ದೇಶ ಶಾಂತಿ, ರಕ್ಷಣೆ, ಬೆಳಕು ಪ್ರೀತಿ ಕೊಡಲೆಂದು. ಆಗ ಜನ್ಮ ತಾಳಿದ್ದೆ ಯೇಸು ಕ್ರಿಸ್ತ. ಜಗತ್ತಿನಲ್ಲಿ ಮಾನವೀಯತೆ ಉಳಿಸಲು ಯೇಸು ಪ್ರಭುವಿನ ಪ್ರಯತ್ನವಾಗಿತ್ತು. ಹಾಗಾಗಿ ಕ್ರಿಸ್ ಮಸ್ ಹಬ್ಬವನ್ನು ಎಲ್ಲೆಡೆ ಶಾಂತಿ ಪ್ರೀತಿ ಸಂಕೇತವಾಗಿ ಆಚರಿಸಲಾಗುತ್ತೆ ಎಂದು ಹೇಳಿದರು.
ಚರ್ಚ್ ಗಳಲ್ಲಿ ಬೆಳಕು ನೀಡುವ ಯೇಸು ಪ್ರಭುವಿಗೆ ಸಾಂಕೆ ತಿಕವಾಗಿ ಹಾಗೂ ತಮ್ಮ ಹರಕೆಗಳನ್ನು ತೀರಿಸಲು ಮೇಣದ ಬತ್ತಿ ಹಚ್ಚುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಸಂತ ಪೇತ್ರರ ಚರ್ಚ್, ಸಂತ ಪಾಲ್ ಚರ್ಚ್, ಮಾರುಕಟ್ಟೆ ಸಮೀಪದ ಸುಮಿತ್ರಾ ಸ್ಮಾರಕ ಚರ್ಚ್ ಗಳಲ್ಲಿ ಯೇಸು ಕ್ರಿಸ್ತನ ಜನ್ಮ ವ್ರುತ್ತಾನ್ತದ ಬಗ್ಗೆ ತಿಳಿಸುವ ಅಲಂಕಾರಿಕ ಬೊಂಬೆಗಳು, ವಸ್ತು ಪ್ರದರ್ಶನಗಳು, ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳು, ಭಕ್ತಿ ಗೀತೆಗಳು ಚರ್ಚ್ಗಳೆಲ್ಲೆಡೆ ಭಕ್ತರ ಗಮನ ಸೆಳೆದವು. ನಗರ ಮಾತ್ರವಲ್ಲದೆ ಗ್ರಾಮಾಂತರದ ಹಲವು ಭಾಗಗಳಲ್ಲಿ ಕ್ರಿಸ್ ಮಸ್ ಹಬ್ಬವನ್ನು ಶ್ರದ್ದಾ ಭಕ್ತಿ ಬಾವ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.