ಚಾಮರಾಜನಗರದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಬೈಕ್ ರ‍್ಯಾಲಿ

ಚಾಮರಾಜನಗರ:ಡಿ.24;ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿಂದು ಬೈಕ್ ರ್ಯಾಲಿಯು ನಗರದ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಿಂದ ಹೊರಟ ಬೈಕ್ ರ್ಯಾಲಿಯು ಸಂತೇಮರಳ್ಳಿ ಸರ್ಕಲ್, ಪಚ್ಚಪ್ಪ ವೃತ್ತದಿಂದ, ಸತ್ತಿ ರಸ್ತೆಯ ಮೂಲಕ ಸಿದ್ಧಾರ್ಥ ಟಾಕೀಸ್ ನಲ್ಲಿ ಕೊನೆಗೊಂಡಿತು. ಇದೆ ವೇಳೆ ಸಂಘದ ಅಧ್ಯಕ್ಷ ನಾಗೇಂದ್ರ ನಾಯಕ್ ಮಾತನಾಡಿ, ನಾಳೆ ರಾಜ್ಯದಾದ್ಯಂತ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಚಿತ್ರ ಬಿಡುಗಡೆಯಾಗುತ್ತಿದ್ದು ಇದು ನಮಗೆ ತುಂಬಾ ಸಂತೋಷ ತಂದಿದೆ ಆದ್ದರಿಂದ ಈ ಬೈಕ್ ರ್ಯಾಲಿ ನಡೆಯುತ್ತಿದ್ದು ಇದೇ ರೀತಿ ರಾಜ್ಯದ ಎಲ್ಲಾ ಜನತೆ ಸುದೀಪ್ ಅವರ ಚಲನಚಿತ್ರವನ್ನು ಬಹು ಸಂಖ್ಯಾ ಅಭಿಮಾನಿಗಳು ನೋಡಿ ಅವರಿಗೆಆಶೀರ್ವಾದ ನೀಡಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಆನಂದ, ಅಭಿಮಾನಿಗಳಾದ ರಾಮು, ಕಿಚ್ಚ ಸೋಮು, ಬಚ್ಚನ್ ನಾಗೇಶ್, ಚಂದ್ರು, ಆಟೋ ಸ್ವಾಮಿ, ಮಧು, ಮನು, ರಂಗಸ್ವಾಮಿ, ಪುಟ್ಟಸ್ವಾಮಿ, ರಂಗಪ್ಪ, ಬಿಳಿಗಿರಿ, ನಗಿನ್, ಮನಿ, ಬಸು ಮದಕರಿ, ಆಟೋ ಸಂತು, ಚೇತನ್ ಸೇರಿದಂತೆ ಕಿಚ್ಚ ಸುದೀಪ್ ಅಭಿಮಾನಿಗಳು ಭಾಗವಹಿಸಿದ್ದರು.