ಮನೆಯಿಂದಲೇ ಮತದಾನ

562 ಮಂದಿ ಮನೆಯಿಂದಲೇ ಮತದಾನ: ಜಿಲ್ಲಾಧಿಕಾರಿ ಆರ್.ಲತಾ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಏಪ್ರಿಲ್ 29 (ಕರ್ನಾಟಕ ವಾರ್ತೆ): 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ಇಂದು ನಡೆದ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲ ಚೇತನರ ನೆರವಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 562 ಮಂದಿ ಉಪಯೋಗಿಸಿಕೊಂಡು ಮನೆಯಿಂದಲೇ ಮತದಾನ ಮಾಡಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 133 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನ ಮತದಾರರಲ್ಲಿ 129 ಮಂದಿ ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ.
179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 100 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನ ಮತದಾರರಲ್ಲಿ 94 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.
180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 220 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನರ ಮತದಾರರಲ್ಲಿ 215 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.
181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 130 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನ ಮತದಾರರಲ್ಲಿ 124 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ 562 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನರ ಮತದಾರರು ಮನೆಯಿಂದಲೇ ಮತದಾನ ಸೌಲಭ್ಯವನ್ನು ಉಪಯೋಗಿಸಿಕೊಂಡು ಮತದಾನ ಮಾಡಿದ್ದಾರೆ.
ಈ ಸೌಲಭ್ಯವನ್ನು ಬಳಸಿಕೊಳ್ಳಲು ಜಿಲ್ಲೆಯಾದ್ಯಂತ 583 ಕೋರಿಕೆ ಸಲ್ಲಿಸಿದ್ದು, 562 ಮಂದಿ ಈ ಸೌಲಭ್ಯದ ಸದುಪಯೋಗ ಪಡೆದಿದ್ದಾರೆ. 583ರಲ್ಲಿ 10 ಮಂದಿ ಮೃತಪಟ್ಟಿದ್ದು, 11 ಜನ ಮತದಾರರು ಅಲಭ್ಯವಿದ್ದ ಕಾರಣ ನಾಳೆ ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು ಪುನಃ ಅವರ ಮನೆಗಳಿಗೆ ಎರಡನೆಯ ಹಾಗೂ ಕಡೆಯ ಬಾರಿಗೆ ತೆರಳಿ ಮತದಾನ ಮಾಡಿಸಿಕೊಳ್ಳಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.