ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಶಾ ಅವರನ್ನು ಗಡಿಪಾರು ಮಾಡಬೇಕು–ಕಾವೇರಿ ಶಿವಕುಮಾರ್

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನಮಗೆ ಎಲ್ಲಾ ಹಕ್ಕುಗಳನ್ನು ಒದಗಿಸಿದೆ ಅಂತಹ ಸಂವಿಧಾನ ರಚಿಸಿದವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅತ್ಯಂತ ಹಗುರವಾಗಿ ಮಾತನಾಡಿರುವುದರಿಂದ ಅವರನ್ನು ಅನಾಗರಿಕ ಮಂತ್ರಿ ಎಂದು ಹೇಳಬಹುದು. ಅವರ ಬಗ್ಗೆ ಸ್ವಲ್ಪವೂ ಗೌರವವಿಲ್ಲ ಈ ರೀತಿ ಹೇಳಿಕೆ ಕೊಡುವ ಉದ್ದೇಶ ಸಂವಿಧಾನ ಬದಲಾವಣೆ ಮಾಡುವ ಹುನ್ನಾರ ಎನ್ನಬಹುದು.ಅಲ್ಲದೆ ಬಿಜೆಪಿಯವರು ಮಾತನಾಡುವಾಗ ನಮ್ಮ ಪಕ್ಷ ಮಹಿಳೆಯರ ಪರ ಎಂದು ಹೇಳುತ್ತಾರೆ ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಆವ್ಯಾಚ್ಯ ಶಬ್ದಗಳಿಂದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನಿಂದಿಸಿರುವುದರಿಂದ ನಾವು ತಿಳಿಯಬಹುದು ಇವರು ಯಾರ ಪರವಾಗಿದ್ದಾರೆ ಎಂಬುದನ್ನು.ಇಂತಹ ಪದ ಬಳಕೆ ಅತ್ಯಂತ ಖಂಡನೀಯ ಆದ್ದರಿಂದ ತಕ್ಷಣದಿಂದಲೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ವಜಾಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಅಹಿಂದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ ಹರದನಹಳ್ಳಿ ಕಾವೇರಿ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ ಆರ್ ಉಮೇಶ್ ಮಲಾರಪಾಳ್ಯ