ಪಕ್ಷದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಪಕ್ಷಕ್ಕೆ ದುಡಿದರೆ ಸೇವೆ ಗುರುತಿಸಿ ಅಧಿಕಾರ ಸಿಗುವುದು ಖಚಿತ– ಜಗದೀಶ್ ಚೌದರಿ
ನೆಲಮಂಗಲ: ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಕಷ್ಟಪಟ್ಟು ಕೆಲಸಮಾಡಿದರೆ ಒಂದಲ್ಲ ಒಂದು ದಿನ ನಾಯಕರು ಗುರುತಿಸಿ ಅಧಿಕಾರ ನೀಡುತ್ತಾರೆ ಎಂದು ಬಿಜೆಪಿ ತಾಲೂಕು ಅದ್ಯಕ್ಷ ಜಗದೀಶ್ಚೌಧರಿ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಗ್ರಾಮದ ಬಳಿಯ ಹಾಲಿ ಡೇ ಪಾರ್ಮ್ ಹೋಟೆಲ್ಯಲ್ಲಿ ಬಿಜೆಪಿ ಪಕ್ಷದಿಂದ ಶುಕ್ರವಾರ ಸದಸ್ಯತ್ವ ಅಭಿಯಾನ ಕುರಿತು ಅಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕ್ರಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸದಸ್ಯತ್ವ ಹೊಂದಿದ ರಾಜಕೀಯ ಪಕ್ಷವಾಗಿದೆ. ಹಿಂದೆ ನಡೆದ ನೋಂದಣಿ ಅಭಿಯಾನಕ್ಕಿಂತಲೂ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸುವ ಜವಾಬ್ದಾರಿ ಹೊತ್ತವರು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು. ಪ್ರಜಾಪ್ರಭುತ್ವವ್ಯ ವಸ್ಥೆಯಲ್ಲಿ ಸದಸ್ಯತ್ವ ಅಭಿಯಾನ ತುಂಬಾಮುಖ್ಯ. ಒಂದು ಕಾಲದಲ್ಲಿ ಚಹಾ ಮಾರುತ್ತಿದ್ದವ್ಯಕ್ತಿ ಈಗದೇಶದ ಪ್ರಧಾನಿಯಾಗಿರುವುದೇ ಸಾಕ್ಷಿಯಾಗಿದ್ದಾರೆ. ಅಮೆರಿಕ, ರಷ್ಯಾದಂಥ ಬಲಶಾಲಿ ರಾಷ್ಟ್ರಗಳ ಅಧ್ಯಕ್ಷರು ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿರವರ ಮಾತಿಗೆ ಗೌರವ ಕೊಡುತ್ತಾರೆ. ಪ್ರಪಂಚದಲ್ಲಿ ಎಲ್ಲಿಯಾದರೂ ಯುದ್ಧವಾದರೆ ಅದನ್ನು ನಿಲ್ಲಿಸುವ ಶಕ್ತಿ ಸಾಮಥ್ಯ ಪ್ರಧಾನಿ ಮೋದಿಗಿದೆ. ಹಾಗಾಗಿ ಬಿಜೆಪಿ. ಪಕ್ಷದಲ್ಲಿ ಸದಸ್ಯರಾಗುವ ಮೂಲಕ ಸ್ಥಾನಮಾನ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಅಪಪ್ರಚಾರಕ್ಕೆ ಕವಿಕೊಡಬೇಡಿ: ಬಿಜೆಪಿ ತಾಲೂಕು ಅದ್ಯಕ್ಷನಾದ ನನ್ನನ್ನು ಕಟ್ಟು ಹಾಕಲು ಎಷ್ಟೇ ಪ್ರಯತ್ನ ಮಾಡಿದ್ದರೂ ಸಾಧ್ಯವಿಲ್ಲ. ಪಕ್ಷ ನಿಷ್ಠೆ ಮತ್ತು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅದ್ದರಿಂದ ಇತ್ತೀಚಿನ ದಿನಗಳಲ್ಲಿ ನನ್ನ ಮೇಲೆ ಸಾಮಾಜಿಕ ತಾಣದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದು ಕವಿಕೊಡ ಬೇಡಿ ಎಂದು ತಾಲೂಕು ಅದ್ಯಕ್ಷ ಜಗದೀಶ್ಚೌಧರಿ ತಿಳಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾದ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಬಲಿಷ್ಠವಾದ ಆರ್ಥಿಕತೆಯ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಪಕ್ಷದ ಸದಸ್ಯತ್ವ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸಿ ಸಾಕಷ್ಟು ಸುಧಾರಣೆಯನ್ನು ಕೈಗೊಳ್ಳಲಾಗಿದೆ.
ತಾಲೂಕಿನಾದ್ಯಂತ ಪ್ರತಿ ಬೂತ್ ನಲ್ಲಿ ಇಬ್ಬರು ಸಕ್ರೀಯ ಸದಸ್ಯರು ಸೇರಿದಂತೆ 12 ಮಂದಿ ತಂಡವನ್ನು ರಚಿಸಿಕೊಳ್ಳಬೇಕಿದೆ. ತಾಲೂಕಿನಾದ್ಯಂತ ಈಗಾಗಲೇ 22 ಸಾವಿರಕ್ಕೂ ಹೆಚ್ಚು ಮಂದಿ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಜತೆಗೆ ಡಿ.25ರಂದು ವಾಜಪಾಯಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಬೂತ್ ಅದ್ಯಕ್ಷ ನೇಮಕ ಮಾಡಿ ವಿಭಿನ್ನ ಕಾರ್ಯಕ್ರಮ ರೂಪಿಸಬೇಕಾಗಿದೆ. ಜತೆಗೆ ಪ್ರತಿಯೊಂದು ಮಹಾಶಕ್ತಿ ಕೇಂದ್ರಕ್ಕೆ ಉಸ್ತುವಾರಿಗಳನ್ನುನಿಯೋಜನೆ ಮಾಡಲಾಗಿದ್ದು ಮುಂದಿನ 5 ದಿನಗಳ ಕಾಲ ಸಕ್ರೀಯವಾಗಿ ಸದಸ್ಯತ್ವ ಮಾಡಲು ಕೈಜೋಡೀಸಬೇಕಾಗಿದೆ ಎಂದರು.
ಸಂದರ್ಭದಲ್ಲಿ ಮಾಜಿ ಶಾಸಕ ಎಂ.ವಿ.ನಾಗರಾಜು, ನೆ.ಯೋ.ಪ್ರಾಧಿಕಾರ ಮಾಜಿ ಅದ್ಯಕ್ಷ ಎಸ್.ಮಲ್ಲಯ್ಯ, ಮಾಜಿ ಸದಸ್ಯ ರಮೇಶ್, ಉದ್ಯಮಿ ಭವಾನಿಶಂಕರ್ಬೈರೇಗೌಡ್ರು, ವಕೀಲ ಅನ್ನದಾನಯ್ಯ, ನಗರಸಭೆ ಹೆಚ್ಚುವರಿ ಸದಸ್ಯ ಕೃಪಾನಂದ್, ಮುನಿರಾಜು, ಅಂಜನಮೂರ್ತಿ, ರಾಮಮೂರ್ತಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್, ಮಹಿಳಾ ಮೋರ್ಚಾ ಅದ್ಯಕ್ಷೆ ಮಂಜುಳಾಸುರೇಶ್, ಪುರಸಭೆ ಮಾಜಿ ಅದ್ಯಕ್ಷ ಎಂ.ರವಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾದ್ಯಕ್ಷ ಕೆ.ಪಿ.ಬೃಂಗೀಶ್, ಗ್ರಾ.ಪಂ ಅದ್ಯಕ್ಷ ರಾಹುಲ್ಗೌಡ, ಮುಖಂಡ ಲೋಕೇಶ್, ಸ್ಟುಡಿಯೋಮಂಜುನಾಥ್, ಅಶ್ವಥ್, ಡಿ.ಸಿದ್ದರಾಜು, ಗಿರೀಶ್, ರಾಜಮ್ಮಪ್ರಕಾಶ್, ಸೌಮ್ಯ, ಶೀಲಾ, ಅನಿತಾ, ಸುಮ, ಶಾಂತಕುಮಾರಿ, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.
20 ನೆಲಪಿಎಚ್ 03 ಸಭೆ: ನೆಲಮಂಗಲದ ಹಾಲಿ ಡೇ ಪಾರ್ಮ್ ಹೋಟೆಲ್ಯಲ್ಲಿ ಬಿಜೆಪಿ ಪಕ್ಷದಿಂದ ಶುಕ್ರವಾರ ಸದಸ್ಯತ್ವ ಅಭಿಯಾನ ಕುರಿತು ಮುಖಂಡರು ಹಾಗೂ ಕಾರ್ಯಕ್ರಮ ಸಭೆಯನ್ನು ಹಮ್ಮಿಕೊಳ್ಳಲಾಗಿತು. ಬಿಜೆಪಿ ಅದ್ಯಕ್ಷ ಜಗದೀಶ್ಚೌಧರಿ, ಮಾಜಿ ಶಾಸಕ ನಾಗರಾಜು, ಜಿಲ್ಲಾದ್ಯಕ್ಷ ರಾಮಕೃಷ್ಣಪ್ಪ ಮತ್ತಿತರರು ಇದ್ದರು.