ಶಿವಗಂಗೆ ಬೆಟ್ಟಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬೇಟಿ ಹಿನ್ನೆಲೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನಗರಸಭಾ ಸದಸ್ಯ ಅಂಜನಮೂರ್ತಿ ಮನವಿ
ನೆಲಮಂಗಲ: ತಾಲೂಕಿನ ಶಿವಗಂಗೆ ಬೆಟ್ಟಕ್ಕೆ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಬೇಟಿ ನೀಡುತ್ತಿದ್ದು ತಾಲೂಕಿನಾದ್ಯಂತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಗರಸಭೆ ಸದಸ್ಯ ಅಂಜನಮೂರ್ತಿ (ಪಾಪಣ್ಣಿ) ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘ ಒಕ್ಕಲಿಗರ ಯುವ ವೇದಿಕೆ ಸಹಯೋಗದಲ್ಲಿ ಅಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಮುದಾಯದ ಏಳಿಗೆ ಶ್ರೀಗಳ ಕೊಡುಗೆ ಅಪಾರವಾಗಿದ್ದು ಅದನ್ನು ಸದಾ ಸ್ಮರಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕಿದೆ. ಕೃಷಿ ಕಾಯಕವನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಸಮುದಾಯಕ್ಕೆ ಧೈರ್ಯ ತುಂಬುವ ಕೆಲಸ ಶ್ರೀಗಳಿಂದ ನಿರಂತವಾಗಿ ನಡೆಸುತ್ತಿದೆ. ಡಿ.25ರಂದು ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪಕೃತಿ ಸೌಂದರ್ಯ ವೀಕ್ಷಣೆ ಹಾಗೂ ಶಿವಗಂಗೆಯ ಶ್ರೀ ಗಂಗಾಧೇಶ್ವರ ದೇವರ ದರ್ಶನ ಪಡೆಯಲು ಶಿವಗಂಗೆ ಬೆಟ್ಟಕ್ಕೆ ಆಗಮಿಸುತ್ತಿದ್ದು ಸಂತೋಷಕರ ಸಂಗತಿ. ಅದ್ದರಿಂದ ನಗರ ಸೇರಿದಂತೆ ತಾಲೂಕಿನಾದ್ಯಂತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ತಾಲೂಕು ವಕೀಲ ಸಂಘದ ನಿರ್ದೇಶಕ ಶ್ರೀನಿವಾಸಪುರಮನುಗೌಡ ಮಾತನಾಡಿ ಶ್ರೀಗಳಿಗೆ ಸಮುದಾಯ ಪರವಾಗಿ ಮತ್ತಷ್ಟು ಧ್ವನಿ ಎತ್ತುವ ನಿಟ್ಟಿನಲ್ಲಿ ಅವರಿಗೆ ಕೈಜೋಡಿಸುವ ಕಾರ್ಯಕ್ಕೆ ಒಂದಾಗಬೇಕಿದೆ. ಶ್ರೀಗಳಗೊಂದಿಗೆ ಬೆಟ್ಟದಲ್ಲಿ ಹೆಜ್ಜೆ ಹಾಕುವ ಪುಣ್ಯ ಸಿಕ್ಕಿದ್ದು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.
ಅಭಿನಂದನೆ: ಸಭೆಯಲ್ಲಿ ಇತ್ತೀಚೆಗೆ ಕುವೆಂಪು ಬತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಬಿ.ಕೆ.ನಟರಾಜು ಮತ್ತು ಕಾರ್ಯನಿರದ ಪತ್ರಕರ್ತ ಸಂಘದ ನೂತನ ಅಧ್ಯಕ್ಷರಾದ ಬುದಿಹಾಲ್‌ಕಿಟ್ಟಿ ಅವರನ್ನು ಸಮುದಾಯದ ಮುಖಂಡರು ಅಭಿನಂದಿಸಿದರು.
ಸಂದರ್ಭದಲ್ಲಿ ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅದ್ಯಕ್ಷ ಎಂ.ಕೆ.ನಾಗರಾಜು, ನಿರ್ದೇಶಕ ಕೆಂಪರಾಜು, ಕರವೇ ರಾಜ್ಯ ಉಪಾಧ್ಯಕ್ಷ ಉಮೇಶ್‌ಗೌಡ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಟಿ.ನಾಗರಾಜು, ವಕೀಲ ಸಂಘದ ಉಪಾಧ್ಯಕ್ಷ ಮೋಹನ್‌ಕುಮಾರ್, ಗ್ರಾಮಪಂಚಾಯಿತಿ ಸದಸ್ಯ ಯಲಚಗೆರೆಹನುಮಂತರಾಜು, ಮಾರೇಗೌಡ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಮುಖಂಡ ಸುಂದರೇಶ್, ಮಂಜುನಾಥ್, ಕುಲವನಹಳ್ಳಿಸುರೇಶ್, ಚನ್ನಕೇಶವ ಶಿವಕುಮಾರ್, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
18 ನೆಲಪಿಎಚ್ ಅಭಿನಂದನೆ: ನೆಲಮಂಗಲದ ನಗರದ ಪ್ರವಾಸಿ ಮಂದಿರದಲ್ಲಿ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘ ಒಕ್ಕಲಿಗರ ಯುವ ವೇದಿಕೆ ಸಹಯೋಗದಲ್ಲಿ ಅಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕುವೆಂಪು ಬತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಬಿ.ಕೆ.ನಟರಾಜು ಮತ್ತು ಕಾರ್ಯನಿರದ ಪತ್ರಕರ್ತ ಸಂಘದ ನೂತನ ಅಧ್ಯಕ್ಷರಾದ ಬುದಿಹಾಲ್‌ಕಿಟ್ಟಿ ಅವರನ್ನು ಅಭಿನಂದಿಸಲಾಯಿತು.