ಮೇ 10 ರಂದು ನೆಡೆಯಲಿರುವ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ದೀರಜ್ ಮುನಿರಾಜು ಪರವಾಗಿ ತಾರಾ ಪ್ರಚಾರಕರಾಗಿ ಇಂದು ನಟ ದರ್ಶನ್ ನೆಡೆಸಬೇಕಿದ್ದ ರೋಡ್ ಶೋ ಪ್ರಚಾರ ರದ್ದಾಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ
ನಟ ದರ್ಶನ್ ರವರು ಶುಕ್ರವಾರ ಸಂಜೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ಮೂಲಕ ಮತಯಾಚನೆಮಾಡಬೇಕಿತ್ತು.

ನಗರದ ಬಸವಣ್ಣ ದೇವಾಲಯದಿಂದ ರಾತ್ರಿ 7ಕ್ಕೆ ಆರಂಭವಾಗಬೇಕಿದ್ದ ಪ್ರಚಾರ ಕಾರ್ಯ ಸಮಯ ವಿಳಂಭದ ಕಾರಣ ರಾತ್ರಿ 8ರ ನಂತರ ಚುನಾವಣಾ ಆಯೋಗದ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಪ್ರಚಾರ ನೆಡೆಸುವಂತಿಲ್ಲ ಈ ಹಿನ್ನಲೆಯಲ್ಲಿ ದರ್ಶನ್ ರವರ ರೋಡ್ ಶೋ ರದ್ದಾಗಿದೆ ಎಂದು ತಿಳಿದು ಬಂದಿದೆ

ನಟ ದರ್ಶನ್ ರನ್ನು ನೋಡಲು ಪಕ್ಷಾತೀತವಾಗಿ ಸೇರಿದ್ದ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.