ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಅಹೋರಾತ್ರಿ ಪ್ರತಿಭಟನೆ
ಚಾಮರಾಜನಗರ:ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಭುವನೇಶ್ವರಿ ವೃತ್ತದ ಬಳಿ ಬಂದು ನಂತರ ಜೋಡಿ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳು ಸಮೀಪಿಸುತ್ತಿದೆ ಶಿಶುಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನಬದ್ಧ ಕರ್ತವ್ಯಗಳಾಗಿವೆ. ಮತ್ತು 2013ರ ಆಹಾರ ಭದ್ರತಾ ಕಾಯ್ದೆ, 2009ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ.
ಅಲ್ಲದೆ ನಮ್ಮ ಬೇಡಿಕೆಗಳು
ಗುಜರಾತ್ ಹೈ ಕೋರ್ಟ್ ತೀರ್ಪಿನಂತೆ ಕಾರ್ಯಕರ್ತಿಯರು ಮತ್ತು ಸಹಾಯಕಿಯರನ್ನು ವರ್ಗ 3ಮತ್ತು 4 ಪರಿಗಣಿಸಿ ಖಾಯಂ ಮಾಡಬೇಕು.
2018 ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವ ಧನ ಹೆಚ್ಚಳ ಮಾಡಿಲ್ಲವಾದ್ದರಿಂದ ಕೇಂದ್ರ ಸರ್ಕಾರವು 26,000ಗಳಿಗೆ ಗೌರವಧನ ಹೆಚ್ಚಿಸಬೇಕು. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ 15000 ರೂಪಾಯಿ ಗೌರವಧನವನ್ನು ಹೆಚ್ಚಿಸಬೇಕು.
ನಿವೃತ್ತಿಯಾಗುವವರಿಗೆ ಇಡಗಂಟು ಅಥವಾ ಎನ್‌ಪಿಎಸ್ ಹಣವನ್ನು ಹಾಗೂ 10,000 ಮಾಸಿಕ ಪಿಂಚಣಿಯನ್ನು ನೀಡಬೇಕು.
ಶಿಕ್ಷಣ ಇಲಾಖೆ ಎಸ್‌ಡಿಎಂಸಿ ಗಳಿಂದ ಪ್ರಾರಂಭ ಮಾಡಿರುವ ಎಲ್ ಕೆ ಜಿ ಯು ಕೆ ಜಿ ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ ಪ್ರಾರಂಭಿಸಬೇಕು.
ನಗರಸಭೆ ನಗರ ಪಾಲಿಕೆ ಮಹಾನಗರ ಪಾಲಿಕೆ ವಿಧಾನಸಭೆ ಲೋಕಸಭಾ ಚುನಾವಣೆಗಳು ಅಲ್ಲದೆ ಉಪಚುನಾವಣೆಗಳಲ್ಲಿ ಮತದಾರರನ್ನು ಗುರುತಿಸುವುದು ಅನರ್ರಗೊಳಿಸುವುದು ಚುನಾವಣಾ ಸಂದರ್ಭದಲ್ಲಿ ಚೀಟಿ ಹಂಚುವುದು ಕೆಲಸ ಮಾಡುವುದು ಮುಂತಾದ ಕೆಲಸಗಳಿಂದ ಅಂಗನವಾಡಿ ಕೇಂದ್ರದಿಂದ ದಿನನಿತ್ಯದ ಕೆಲಸಗಳನ್ನು ಅಂಗನವಾಡಿ ನೌಕರರು ಮಾಡುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ಅವರನ್ನು ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸಬೇಕು.
ಸಚಿವರು ಒಪ್ಪಿಕೊಂಡಂತೆ ಸಾಮೂಹಿಕ ಆರೋಗ್ಯ ವಿಮೆಯನ್ನು ಕೂಡಲೇ ಜಾರಿಗೊಳಿಸಬೇಕು.
ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್‌ಟಿ ಹಾಕಬಾರದು ಘಟಕ ವೆಚ್ಚ ಹೆಚ್ಚಳ ಮಾಡಿ ಹಿಂದಿನಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೆನು ಅಂತಿಮಗೊಳಿಸುವ ವ್ಯವಸ್ಥೆ ಜಾರಿಯಾಗಬೇಕು ಅಂಗನವಾಡಿ ಕೇಂದ್ರದಲ್ಲಿ ಮೊಬೈಲ್ ನಲ್ಲಿ ದಾಖಲೆ ನಿರ್ವಹಿಸುವುದರಿಂದ ದಾಖಲಾತಿ ಬರೆಯುವ ಸಂಖ್ಯೆ ಕಡಿಮೆ ಮಾಡಬೇಕು ಇಲಾಖೆ ನಡೆಸುವ ಮಾಸಿಕ ಮತ್ತು ಗೌರವದನದ ಸಭೆಗಳನ್ನು ಅಂಗನವಾಡಿ ನೌಕರರಿಗೆ ವ್ಯವಸ್ಥೆ ಮಾಡಬೇಕು ಹಲವಾರು ಬೇಡಿಕೆಗಳನ್ನು ನೀಡಬೇಕೆಂದು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರತಿಭಟನೆಯಲ್ಲಿ ಎ.ನಾಗಮಣಿ ಪ್ರಧಾನ ಕಾರ್ಯದರ್ಶಿ, ಜಿ. ಭಾಗ್ಯ ಖಜಾಂಚಿ, ಶಾಹಿದ ಬಾನು ಕಾರ್ಯದರ್ಶಿ, ಗುರುಲಿಂಗಮ್ಮ ಖಜಾಂಚಿ, ಪಾರ್ವತಮ್ಮ ಅಧ್ಯಕ್ಷರು ಸಂತೆಮರಳ್ಳಿ, ಜಯಮಾಲಾ, ತುಳಸಮ್ಮ, ಸೂಜಿಯ, ಸುಮಿತ್ರ, ಗುರುಮಲ್ಲಮ್ಮ, ಶಾಂತಮ್ಮ, ಸುಂದ್ರಮ್ಮ, ಇತರರು ಭಾಗವಹಿಸಿದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ