ದೊಡ್ಡಬಳ್ಳಾಪುರ ವಿಧಾನ ಕ್ಷೇತ್ರದ ವ್ಯಾಪ್ತಿಯ ೨೭೬ಮತಗಟ್ಟೆಗಳ ವ್ಯಾಪ್ತಿಯ ೨೩ಸೆಕ್ಟರ್ ಗಳಲ್ಲಿ ಒಟ್ಟು ೨೨೦ ಮಂದಿ ಹಿರಿಯ ನಾಗರೀಕರು ಹಾಗು ವಿಷೇಷ ಚೇತನರಿಗೆ ಮನೆಯಿಂದ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆಯೆಂದು ಚುನಾವಣಾ ಅಧಿಕಾರಿಯಾಗಿರುವ ಉಪ ವಿಭಾಗಾದಿಕಾರಿ ಎಸ್ ತೇಜಸ್ ಕುಮಾರ್ ಹೇಳಿದರು ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟವರು ೫೦೦೪ ಇದ್ದಾರೆ ೩೩೨೭ ಮಂದಿ ವಿಕಲಚೇತನರಿದ್ದಾರೆ.
ಮತಗಟ್ಟೆಗೆ ಬರಲಾಗದ ೨೨೦ ಜನರಿಗೆ ೧೨ ಡಿ ಫಾರ್ಂ ನೀಡಿ, ವಾಪಸ್ ತರೆಸಿಕೊಂಡಿದ್ದೇವೆ ಏಪ್ರಿಲ್ ೨೮ ಹಾಗೂ ೩೦ ರಂದು ಮತದಾರರ ಮನೆಗೆ ಹೋಗಿ ಮತದಾನ ಮಾಡಿಸಲಾಗುವುದು ಜೊತೆಗೆ ಮತದಾನದ ಗೌಪ್ಯತೆ ಕಾಪಾಡಲಾಗುವುದು.
ಮನೆಯಿಂದ ಮತದಾನಕ್ಕಾಗಿ ೧೮ ಬಸ್ ರೂಟ್ ಗುರ್ತಿಸಿದ್ದು ೧೮ತಂಡ ರಚಿಸಲಾಗಿದೆ .ಪ್ರತಿ ತಂಡದಲ್ಲಿ ಮತಗಟ್ಟೆ ಅಧಿಕಾರಿ,ಮೈಕ್ರೊ ಅಬ್ಸರ್ವರ್,ವಿಡಿಯೋ ಗ್ರಾಫರ್,ಪೋಲಿಸರನ್ನು ಒಳಗೊಂಡ ತಂಡಗಳು ಕಾರ್ಯ ನಿರ್ವಹಿಸಲಿವೆ.
ಕಂದಾಯ ನಿರೀಕ್ಷಕ,ಉಪ ತಹಶಿಲ್ದಾರ್,ಗ್ರಾಮಲೆಕ್ಕಿಗರು ತಂಡದಲ್ಲಿ ಇರುವರು.ಪ್ರತ್ಯೇಕ ಕಂಫಾರ್ಟ್ಮೆಂಟ್ ಸಿದ್ದ ಪಡಿಸಿ ಮತ ಚಲಾವಣೆ ಮಾಡಿಸಲಾಗುವುದು ಎಂದು ವಿವರಿಸಿದರು
ಉಳಿದಂತೆ ಎಲ್ಲಾ ಮತಗಟ್ಟೆಗಳಲ್ಲಿಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಒಟ್ಟು 2,14,166 ಮತದಾರಿದ್ದಾರೆ ೫೮ ಮಂದಿ ಸೇವಾ ಮತದಾರರಿದ್ದಾರೆ ಎಂದು ತೇಜಸ್ ಕುಮಾರ್ ಹೇಳಿದ್ದಾರೆ.