ದೈವ ಭಕ್ತಿಯಿಂದ ಶಾಂತಿ ನೆಮ್ಮದಿ ಲಭ್ಯ–ಹರೀಶ್ ಗೌಡ
ದೊಡ್ಡಬಳ್ಳಾಪುರ:ಗ್ರಾಮಗಳ ಶಾಂತಿ ಸೌಹಾರ್ದತೆಗಾಗಿ ಊರಿನ ಗ್ರಾಮಸ್ಥರೆಲ್ಲ ಒಂದುಕಡೆ ಸೇರಿ ದೇವರುಗಳ ಭಕ್ತಿ ಕಾರ್ಯಗಳು ಸದಾಕಾಲ ನೆಡೆಯುತ್ತಿದ್ದರೆ ಗ್ರಾಮಗಳಲ್ಲಿ.ಶಾಂತಿ ನೆಮ್ಮದಿ ವಾತಾವರಣ ನೆಲೆಸಲು ಸಹಕಾರಿಯಾಗುತ್ತದೆ ಎಂದು ಜೆ ಡಿ ಎಸ್ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು
ನಗರದ ಹೊರವಲಯದ ರಾಜೀವ್ ಗಾಂಧಿ ಬಡಾವಣೆ 2ನೇ ಹಂತ ಹಾಗೂ ಗಂಗಾಧರ ಪುರ ಲೇಔಟ್ ನಲ್ಲಿ ಶ್ರೀ ಮುತ್ಯಾಲಮ್ಮ ಶ್ರೀ ಕಾಳಮ್ಮ ಶ್ರೀ ದೊಡ್ಡಮ್ಮ ದೇವಿಯರ 3 ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹರೀಶ್ ಗೌಡ ದಂಪತಿಗಳು ಮಾತನಾಡಿ ಎಲ್ಲರೂ ಒಂದು ಕಡೆ ಸೇರಿ ಆಚರಿಸುವ ಈ ರೀತಿಯ ದೇವರ ಕಾರ್ಯಕ್ರಮ ಜನಗಳ ಪರಸ್ಪರ ಒಟ್ಟಿಗೆ ಸೇರಿ ಆಚರಿಸುವ ಮೂಲಕ ಸೌಹಾರ್ದತೆ ಮನಸ್ಸಿಗೆ ಶಾಂತಿ ನೆಮ್ಮದಿ ವಾತಾವರಣ ನೆಲೆಸಲು ಸಹಕಾರಿ ಆಗುತ್ತದೆ ಎಂದು ಹೇಳುತ್ತಾ, ಎಲ್ಲಾ ಜನರ ಜೀವನ ಶಾಂತಿ ನೆಮ್ಮದಿ ವಾತಾವರಣ ತಂದು ಎಲ್ಲಾ ನಿವಾಸಿಗಳಿಗೆ ಒಳ್ಳೆಯದಾಗಲಿ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಶುಭ ಹಾರೈಸಿದರು.
ಅದೇ ರೀತಿ ಜೆಡಿಎಸ್ ಮುಖಂಡ ಪ್ರವೀಣ್ ಶಾಂತಿನಗರ ರವರು ಮಾತನಾಡುತ್ತ ಹೆಚ್ಚು ಬಡವರು ಕೂಲಿ ಕಾರ್ಮಿಕರು ಕಟ್ಟಡ ಕಾರ್ಮಿಕರು ನೇಕಾರರು ವಾಸಿಸುತ್ತಿರುವ ಈ ಭಾಗದಲ್ಲಿ ಮೂಲಭೂತ ಸಮಸ್ಯೆಗಳು ರಸ್ತೆ ಚರಂಡಿ ಶುದ್ಧ ಕುಡಿಯುವ ನೀರು ಬೀದಿ ದೀಪಗಳು ನಗರಸಭೆಯಿಂದ ದೊರೆಯುವ ಎಲ್ಲಾ ಸೌಲಭ್ಯಗಳು ಈ ಭಾಗಕ್ಕೆ ಹೆಚ್ಚು ದೊರಕಲಿ ಹಾಗೂ ಈ ಭಾಗದಲ್ಲಿ ಕಾರ್ಮಿಕ ವರ್ಗದವರಿಗೆ ಇಲ್ಲಿನ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಸ್ಸಿನ ಸೌಕರ್ಯ ಈ ಭಾಗದಲ್ಲಿ ಆಗಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಪ್ರಮೀಳಾ ಮಹದೇವ್ ರವರು. ಮಾಜಿ ನಾಮಿನಿ ನಗರ ಸಭಾ ಸದಸ್ಯರು ತಳವಾರ್ ನಾಗರಾಜ್. ದೊಡ್ಡ ತುಮಕೂರು ಪ್ರಭಾಕರ್ ರವರು, ಹಾದ್ರೀಪುರ ಮಹೇಶ್ ರವರು,ಸಂಜೀವ ರವರು, ಹರ್ಷ ರವರು. ಕೇಶವ ಮೂರ್ತಿ ಪ್ರಧಾನಿ ರವರು,ಮಂಜು ರವರು, ಗೌರಮ್ಮ ಸೇರಿದಂತೆ ಇನ್ನು ಹಲವು ಮುಖಂಡರು ಹಾಜರಿದ್ದರು