ದೊಡ್ಡಬಳ್ಳಾಪುರ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಚಿಲ್ಲರೆ ಅಂಗಡಿಗಳು ಮತ್ತು ಮನೆಗಳ ಮೇಲೆ ಅಬಕಾರಿ ಮತ್ತು ಎಫ್.ಎಸ್.ಟಿ ತಂಡಗಳಿಂದ ದಾಳಿ , ಒಂದೇ ದಿನ 11 ಪ್ರಕರಣ ದಾಖಲು ಮಾಡಲಾಗಿದೆ ಆರೋಪಿಗಳನ್ನು ದಸ್ತಗಿರಿ ಮಾಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 34,96,998 ಮೌಲ್ಯದ 14,992 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದ್ದು ಒಟ್ಟು 90 ಪ್ರಕರಣ ದಾಖಲಾಗಿದೆ.
ಗುರುವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಂಗಳಾಪುರದ ಕೆರೆಗುಟ್ಟೆಯ ಅಂಬೇಡ್ಕರ್ ನಗರದ ನಾಗರಾಜು ಎಂಬುವರ ಮನೆ ಮೇಲೆ ದಾಳಿ ನೆಡೆಸಿ 32 ಮದ್ಯದ ಟೆಟ್ರಾ ಪ್ಯಾಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆ ವೀರಭದ್ರನಪಾಳ್ಯ ತಿಪ್ಪಾಪುರ ಗ್ರಾಮ ದೊಡ್ಡ ತುಮಕೂರು ಆದಿನಾರಾಯಣ ಹೊಸಹಳ್ಳಿ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನೆಡೆಸಿ ಪ್ರಕರಣ ದಾಖಲಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ರೈಲ್ವೇ ನಿಲ್ದಾಣದ ಬಳಿ ಇರುವ ಅಲಂಕಾರ್ ಬಾರ್&ರೆಸ್ಟೋರೆಂಟ್ ಬೆಳವಂಗಲದ ಮಾರುತಿ ಡಾಬಾ ಬಾಲಾಜಿ ಡಾಬಾ ಮೇಲೆ ದಾಳಿ ನೆಡೆಸಿ ಅಬಕಾರಿ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.