ಘಾಟಿ ಕ್ಷೇತ್ರಕ್ಕೆ ಕ್ರಿಕೆಟಿಗ ಕುಲ್ ದೀಪ್ ರಾಂಪಾಲ್ ಸೇನ್ ಬೇಟಿ ವಿಶೇಷ ಪೂಜೆ

ದೊಡ್ಡಬಳ್ಳಾಪುರ: ಅಂತರಾಷ್ಟ್ರೀಯ ಕ್ರಿಕೆಟಿಗ, ಐ.ಪಿ.ಎಲ್ ಪಂಜಾಬ್ ಕಿಂಗ್ಸ್ ತಂಡದ ವೇಗಿ ಬೌಲರ್ ಕುಲದೀಪ್ ರಾಂಪಾಲ್ ಸೇನ್ ಅವರು ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ,ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಧ್ಯಪ್ರದೇಶದ ಕುಲದೀಪ್ ರಾಂಪಾಲ್ ಸೇನ್ ಅವರು ಪ್ರಸ್ತುತ ತಮಿಳುನಾಡು ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್‌ಗಾಗಿ ಆಡುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಆಯ್ಕೆಗೂ ಮುನ್ನ ಘಾಟಿ ಸುಬ್ರಹ್ಮಣ್ಯ ದೇವರಿಗೆ ಹರಕ್ಕೆ ಹೊತ್ತಿದ್ದ ಕುಲ್ದೀಪ್ ಸೇನ್ ಅವರು, ಆಯ್ಕೆ ನಂತರ ಇಂದು ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.

ಈ ವೇಳೆ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ವಿದ್ವಾನ್ ಎಸ್.ನವೀನ್, ದೇವಾಲಯದ ಸಿಬ್ಬಂದಿ ನಂಜಪ್ಪ, ಕಂಚಿ ವೆಂಕಟೇಶ್ ಮತ್ತಿತರರಿದ್ದರು.