ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದು : ನಗರಸಭಾ ಸದಸ್ಯೆ ಕುಮುದ ಕೇಶವ ಪೂರ್ತಿ

ಚಾಮರಾಜನಗರ: ಡಿ.06: ಡಾ.ಬಿ.ಆರ್ ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದ ಸಾಧನೆಗಳು ಅಪಾರವಾದದ್ದು ಎಂದು 26ನೇ ವಾರ್ಡ್ ನ ನಗರಸಭಾ ಸದಸ್ಯರಾದ ಕುಮದಾ ಕೇಶವಮೂರ್ತಿ ಅವರು ತಿಳಿಸಿದರು.

ನಗರದ 26ನೇ ವಾರ್ಡ್ ನ ಡಾ. ಬಿಆರ್ ಅಂಬೇಡ್ಕರ್ ಪಾರ್ಕ್ ನಲ್ಲಿ ಡಾ.ಎಸ್.ಪಿ ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಫ್ರೆಂಡ್ಸ್ ಮ್ಯೂಸಿಕ್ ಮೆಲೋಡಿಯಸ್ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ ನಮಗೆ ಅಪಾರವಾದದ್ದು, ಅಲ್ಲದೆ ಅವರು ನಮಗೆ ನೀಡಿರುವ ಸಂವಿಧಾನವು ಉತ್ತಮವಾದದ್ದು ಆದ್ದರಿಂದ ಅವರ ಆಶಯದಂತೆ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.

ಡಾ.ಎಸ್.ಪಿ ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಜಂಟಿ ಕಾರ್ಯದರ್ಶಿ ಜೋಸೆಫ್ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಸಂವಿಧಾನದಲ್ಲಿ ಎಲ್ಲಾ ರೀತಿಯ ಸಮೂಲಭೂತ ಹಕ್ಕುಗಳನ್ನು ಒದಗಿಸಿ ಕೊಟ್ಟಿದ್ದಾರೆ ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಕಲಾವಿದರಿಂದ ಅಂಬೇಡ್ಕರ್ ಗೀತೆಗಳನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಡಾ.ಎಸ್.ಪಿ ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ.ಶಿವಣ್ಣ ಮಂಗಲ ಹೊಸೂರು, ಸದಸ್ಯರಾದ ಬಂಗಾರು, ಫ್ರೆಂಡ್ಸ್ ಮ್ಯೂಸಿಕ್ ಮೆಲೋಡಿಯಸ್ ಮಾಲೀಕರಾದ ದೊರೆರಾಜು ಆಲೂರು ಹಾಗೂ ಚಂದಕವಾಡಿ ನಾಗಮಹದೇವ್,ಶಿಕ್ಷಕರಾದ ನಂಜುಂಡಸ್ವಾಮಿ(ಪಾಪು),ಆರ್.ಶಿವಮೂರ್ತಿ, ವಕೀಲರಾದ ಆಂಟೋನಿ, ಇರಸವಾಡಿ ಜಯಶಂಕರ್, ಹೌಸಿಂಗ್ ಬೋರ್ಡ್ ನಿವಾಸಿಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ