*ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ*

ಯಳಂದೂರು.ತಾಲ್ಲೋಕಿನ ಹೊನ್ನೂರು ಗ್ರಾಮದ ಬೀಮ್ ರಾವ್ ಅಂಬೇಡ್ಕರ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68 ನೇ ಪರಿನಿಬ್ಬಾಣ ದಿನದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಮಹಾವನ ಬುದ್ಧ ವಿಹಾರ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ವತಿಯಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬುದ್ಧ ವಿಹಾರದ ಪ್ರಧಾನ ದಿಕ್ಕುಗಳಾದ ಬಂತೆ ಬುದ್ಧ ರತ್ನ ರವರು ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಬುದ್ಧನ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಅನುಯಾಯಿಗಳು ಸ್ವ ಇಚ್ಛೆ ಯಿಂದ ಆಗಮಿಸಿ 75 ಜನರು ರಕ್ತದಾನವನ್ನು ಮಾಡಿದ್ದಾರೆ, ಪ್ರಾಥಮಿಕ ಆರೋಗ್ಯ ತಪಾಸಣೆಯಲ್ಲಿ 150 ಜನ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ, ಕಣ್ಣಿನ ಶಸ್ತ್ರ ಚಿಕಿತ್ಸೆಗೆ 15 ಜನರನ್ನು ತಮಿಳುನಾಡಿನ ಕೊಯಮತ್ತೂರಿನ ಅರವಿಂದ್ ಕಣ್ಣಾಸ್ಪತ್ರೆಗೆ ಕಳುಹಿಸಲಾಯಿತು. ನಿರಾಶ್ರಿತರು ಹಾಗೂ ನಿರ್ಗತಿಕರಿಗೆ 60 ಜನರಿಗೆ ಕಂಬಳಿ ಹೋದಿಕೆಯನ್ನು ವಿತರಣೆ ಮಾಡಲಾಯಿತು.

ನಂತರ ಕಾರ್ಯಕ್ರಮ ಕುರಿತು ಬಂತೆ ಬುದ್ಧ ರತ್ನ ರವರು ಮಾತನಾಡಿ ಅಂಬೇಡ್ಕರ್ ಅವರು ದೇಶದೊಳಗೆ ಜನರು ಸ್ವತಂತ್ರವಾಗಿ ಬದುಕಬೇಕು ಎಂದು ಕನಸು ಕಂಡರೂ ಅದಕ್ಕಾಗಿ ಹೋರಾಟ ಮಾಡಿದರು. ಜಾತಿವಾದಿಗಳು ಮನುವಾದಿಗಳ ನೂರಾರು ಸಂಚನ್ನು ಮುರಿದು ಪವಿತ್ರವಾದ ಸಂವಿಧಾನವನ್ನು ಈ ದೇಶಕ್ಕೆ ಅರ್ಪಿಸಿದರು. ಅಂಬೇಡ್ಕರ್ ಅವರಂತಹ ರಾಷ್ಟ್ರಪ್ರೇಮಿ ಇಂದಿಗೂ ಯಾರು ಇಲ್ಲ ಮುಂದೆಯೂ ಬರಲು ಸಾಧ್ಯವಿಲ್ಲ ಅಂಬೇಡ್ಕರ್ ರವರು ಅಪಾರ ದೇಶಪ್ರೇಮಿಯಾಗಿದ್ದರು ಅವರು ರಾಷ್ಟ್ರದ ಬಗ್ಗೆ ಏನು ಹೇಳುತ್ತಿದ್ದಾರೆಂದರೆ ನಾನು ಮೊದಲನೆಯದಾಗಿ ಮತ್ತು ಕೊನೆಯದಾಗಿಯೂ ಇಂಡಿಯನ್ ( ಭಾರತೀಯ) ಹೇಳುತ್ತಿದ್ದರು. ಅಂಬೇಡ್ಕರ್ ಅವರು ಭಾರತದಲ್ಲಿ ಜನಿಸದೆ ಇರುತ್ತಿದ್ದರೆ ಇಂದು ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು ಯೋಚಿಸಲು ಸಾಧ್ಯವಾಗುತ್ತಿರಲಿಲ್ಲ, ಇಂತಹ ಮಹಾನ್ ಚೇತನಕ್ಕೆ ನಾವು ಯಾವ ರೀತಿಯಿಂದಲೂ ಗೌರವ ಆದರಗಳನ್ನು ಸಲ್ಲಿಸಿದರು ಅದು ಸಾಲದು ಹಾಗಾಗಿ ಅಂಬೇಡ್ಕರ್ ಅವರ ಪಾದಕಮಲಗಳಿಗೆ ಸೇವೆಯ ಮೂಲಕ ಒಂದು ಸಣ್ಣ ಗೌರವ ಸಮರ್ಪಣೆ ಸಲ್ಲಿಸುವ ಸಲುವಾಗಿ ಈ ದಿನ ಈ ಪುಣ್ಯ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಂಡ್ ವೈಟ್ ಫೌಂಡೇಶನ್ ಅಧ್ಯಕ್ಷರಾದ ಕೆಸ್ತೂರು ಶಾಂತರಾಜು, ಭೀಮರಾವ್ ರಾಮ್ ಜಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಮೋದ್, ಲ್ಯಾಬ್ ಟೆಕ್ನಿಷಿಯನ್ ಮೋಹನ್ ಬಾಬು, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರು ನಿರಂಜನ್, ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟಬಸವಯ್ಯ, ಗುತ್ತಿಗೆದಾರ ಸೋಮಣ್ಣ, ಸುರೇಶ್,ಮಲ್ಲಿಕ್,ಬಳೇಪೇಟೆ ಬಂಗಾರು .ರವಿಶಂಕರ್, ಹೊನ್ನೂರು ಮತ್ತು ಕೆಸ್ತೂರು ಗ್ರಾಮದ ಅಂಬೇಡ್ಕರ್ ಯುವಕ ಸಂಘ ಹಾಗೂ ಬೌದ್ಧ ಉಪಸಕರು ಹಾಜರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ