ಹಾಲು ಉತ್ಪಾದಕರಿಗೆ ಡೇರಿ ಸದಾ ಶ್ರೀರಕ್ಷೆಯಾಗಿದೆ –ಶಾಸಕ ಎನ್.ಶ್ರೀನಿವಾಸ್

ನೆಲಮಂಗಲ:ಹೊನ್ನಗಂಗಯ್ಯನ ಪಾಳ್ಯದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದಿಂದ ನೂತನವಾಗಿ ನಿರ್ಮಾಣ ಮಾಡಿದ್ದು ಡೈರಿ ಕಟ್ಟಡ ಹಾಗೂ ಶುದ್ದಕುಡಿಯುವ ನೀರಿನ‌ ಘಟಕವನ್ನು ಶಾಸಕ ಎನ್.ಶ್ರೀನಿವಾಸ್ ಉದ್ಘಾಟಿಸಿದರು.

ರೈತರು ಬೆಳೆಯುವ ಬೆಳೆಗಳಲ್ಲಿ ಒಮ್ಮೊಮ್ಮೆ ನಷ್ಟ ಉಂಟಾಗಬಹುದು.
ಆದರೆ, ಹಾಲು ಉತ್ಪಾದಕರಿಗೆ ಡೇರಿ ಸದಾ ಶ್ರೀರಕ್ಷೆಯಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.‌
ನಗರಸಭೆ ವ್ಯಾಪ್ತಿಯ ಸೊಂಡೇಕೊಪ್ಪ‌ಮುಖ್ಯರಸ್ತೆ ಹೊನ್ನಗಂಗಯ್ಯನಪಾಳ್ಯದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದಿಂದ ನೂತನವಾಗಿ ನಿರ್ಮಾಣ ಮಾಡಿದ್ದು ಡೈರಿ ಕಟ್ಟಡ ಹಾಗೂ ಶುದ್ದಕುಡಿಯುವ ನೀರಿನ‌ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಬೇಸಾಯದ ಜತೆಗೆ ಹೈನುಗಾರಿಕೆ ಮೇಲೂ ಹೆಚ್ಚು ಅವಲಂಬಿತರಾಗಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಬಮೂಲ್ ಮಾಡಬೇಕಿದೆ.
ಸಣ್ಣ ಮತ್ತು ಮಧ್ಯಮ ರೈತರಿಗೆ ಹೈನುಗಾರಿಕೆ ಪ್ರಧಾನ
ಉಪ ಕಸುಬು ಅದರ ಆದಾಯ ಮೂಲವಾಗಿದೆ, ಜತೆಗೆ ಕುರಿ, ಕೋಳಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ರಾಜ್ಯ ಸರ್ಕಾರ ರೈತರ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವ ಕಾರ್ಯ ಮಾಡಬೇಕಿದೆ. ನಗರದಲ್ಲಿಯೂ ಹೈನುಗಾರಿಯನ್ನು ನಂಬಿಕೊಂಡು ಜೀವನ ಮಾಡುತ್ತಿರುವುದು ಸಂತೋಷಕರ ಸಂಗತಿ. ಗ್ರಾಮದ ಡೈರಿ ಕಟ್ಟಡ ಶಾಸಕರ ವಿಶೇಷ ಅನುದಾನದಡಿ 5 ಲಕ್ಷವನ್ನು ನೀಡುವುದಾಗಿ ತಿಳಿಸಿದರು.

ಬಮೂಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಮಾನಾಡಿ‌ತಾಲ್ಲೂಕಿನಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದೆ.

ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ
ಆ ಸಂಘಗಳು ಅಭಿವೃದ್ದಿ ಹೊಂದಲು ಸಾಧ್ಯ.ಬಮೂಲ್‌ಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವಲ್ಲಿ ತಾಲೂಕು ಮೊದಲನೆ ಸ್ಥಾನವನ್ನು ಪಡೆದುಕೊಂಡಿದೆ. ಜತೆಗೆ ಒಕ್ಕೂಟದಲ್ಲಿ ತಾಲೂಕು ಮಾದರಿಯಾಗಿದೆ ಎಂದರು.

ಹೊನ್ನಗಂಗಯ್ಯನಪಾಳ್ಯದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಆರ್.ಜಗದೀಶ್ ಮಾತನಾಡಿ ಕೆಎಂಎಫ್, ಬಮೂಲ್ ಹಾಗೂ ಧರ್ಮಸ್ಥಳ ಸಂಸ್ಥೆ, ಶಾಸಕರು ಸೇರಿದಂತೆ ಕೆಲ ದಾನಿಗಳ ಸಹಕಾರದಿಂದ ಸುಸಜ್ಜಿತ ಡೈರಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ನಗರದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಲೀಟರ್ ಹಾಲನ್ನು ರೈತರಿಂದ ಡೈರಿ ನೀಡುತ್ತಿದೆ. ರೈತರಿಗೆ ಅನುಕೂಲ ವಾಗುವ ನಿಟ್ಟಿಲ್ಲಿ ಬಮೂಲ್ ಸಂಸ್ಥೆಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು ರೈತರಿಗೆ ನೀಡುವ ಕಾರ್ಯ ಮಾಡಲಾಗಿದೆ ಎಂದರು.

ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಆದ್ಯಕ್ಷ ರಾಜಣ್ಣ, ಮಾಜಿ ಸದಸ್ಯ ಬಿ.ಜಿ.ವಾಸು, ಬಮೂಲ್ ವ್ಯವಸ್ಥಾಪಕ ಗೋಪಾಲ್‌ಗೌಡ, ಗುರುವನಹಳ್ಳಿ,ಡೈರಿ ಕಾರ್ಯದರ್ಶಿ ರಾಜಗೋಪಾಲ್, ಕೋಡಿಹಳ್ಳಿ ಡೈರಿ ಕಾರ್ಯದರ್ಶಿ ನರಸಿಂಹಮೂರ್ತಿ, ಹನುಮಂತೇಗೌಡನಪಾಳ್ಯ‌ ಡೈರಿ ಕಾರ್ಯದರ್ಶಿ ಹರೀಶ್, ಬಸವನಗರ ಡೈರಿ ಅದ್ಯಕ್ಷ ಬಾವಿಕೆರೆಗಂಗರಾಜು, ಹೊನ್ನಗಂಗಯ್ಯನಪಾಳ್ಯದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕ ಹೇಮಂತ್‌ಕುಮಾರ್, ಭಾಗ್ಯಮ್ಮ, ತಮ್ಮಯ್ಯ, ಸಿದ್ದಗಂಗಯ್ಯ, ಗಿತೀಶ್, ನಿರಂಜನ್‌ಮೂರ್ತಿ, ಲಕ್ಷ್ಮಮ್ಮ, ಭಾಗ್ಯ, ಕೆಂಪರತ್ನಮ್ಮ, ಸಾವಿತ್ರಮ್ಮ, ಕಾರ್ಯದರ್ಶಿ ಸದಾಶಿವಯ್ಯ, ಮುಖಂಡ ಚೇತನ್‌ಕುಮಾರ್, ಮಂಜುನಾಥಯ್ಯ, ಗರುಡಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಬಮೂಲ್ ನಿರ್ದೇಶಕ‌ಜಿ.ಆರ್.ಭಾಸ್ಕರ್, ಡೈರಿ ಅದ್ಯಕ್ಷ ಆರ್.ಜಗದೀಶ್ ಮತ್ತಿತರರು ಇದ್ದರು.