ಕಾಲುವೆ ಮಠ ಮತ್ತು ದೊಡ್ಡಬೆಲೆ ಮಠ ದಲ್ಲಿ
ಶರಣ ಸಂಗಮ ಕವಿಗೋಷ್ಠಿ ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮ
ನೆಲಮಂಗಲ:ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದಲ್ಲಿರುವ ಕಾಲುವೆ ಮಟ್ಟದಲ್ಲಿ ಲಿಂಗೈಕ್ಯ ರುದ್ರ ಒಡೆಯರ್ ಮಹಾಸ್ವಾಮಿಗಳು ಹಾಗೂ ರುದ್ರಮನಿ ಮಹಾಸ್ವಾಮಿಗಳವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಹಾಗೂ ಶಿವ ತತ್ವ ಚಿಂತನಾ ಧಾರ್ಮಿಕ ಸಾಹಿತ್ಯ ಸರಣ ಸಂಗಮ ಕವಿ ಗೋಷ್ಠಿ ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಕಾರ್ತಿಕ ಮಾಸದ ಗುರುವಂದನಾ ಕಾರ್ಯಕ್ರಮವನ್ನು
ಕಾಲುವೆ ಮಠ ಮತ್ತು ದೊಡ್ಡಬೆಲೆ ಮಠ ದಲ್ಲಿ
ಶರಣ ಸಂಗಮ ಕವಿಗೋಷ್ಠಿ ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮವಾಗಿತ್ತು
ಕಾರ್ಯಕ್ರಮದಲ್ಲಿ
ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠಧ್ಯಕ್ಷರಾದ
ಸಿದ್ದಲಿಂಗ ಮಹಾಸ್ವಾಮಿಗಳು ಶಿವಪೂಜೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು
ನಿರಂತರ ಹಲವು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದು ಕವಿ ಗೋಷ್ಠಿ ಉದ್ಘಾಟಿಸಿದ ಶ್ರೀಗಳು
ಆಶಯ ನುಡಿಗಳ ನಾಡುತ್ತಾ
ಯಾವುದೇ ಕಾರ್ಯಕ್ರಮಗಳಲ್ಲಿ ಸತ್ಸಂಗ ಪ್ರವಚನವನ್ನು ಏರ್ಪಡಿಸಿದರೆ ಭಕ್ತರು ಒಂದು ಗಂಟೆಗಳ ಕಾಲ ಆಲಿಸಿದರೆ ಸಾಕು ನೂರು ಪುಸ್ತಕಗಳಲ್ಲಿನ ವಿಷಯವನ್ನ ಓದಿದಂತಾಗುತ್ತದೆ ಮತ್ತು ಜ್ಞಾನಾರ್ಜನೆ ಯಾಗುತ್ತದೆ
ಧಾರ್ಮಿಕ ಹಾಗು ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಇಂಥ ಕಾರ್ಯಕ್ರಮಗಳು ಸಮಾಜಕ್ಕೆ ಹೆಚ್ಚು ನೀಡಬೇಕೆಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಇಮ್ಮಡಿ ಶಿವರುದ್ರ ಮಹಾಸ್ವಾಮಿಗಳು ಪೀಠಾಧ್ಯಕ್ಷರು ಕಾಲುವೆ ಮಠ ಇವರು ಮಾತನಾಡಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಚಿಂತನಾಗೋಷ್ಠಿ ನಡೆಯುತ್ತಿರುವುದು ಮಠದ ಸೌಭಾಗ್ಯ ಇಂತ ಕಾರ್ಯಕ್ರಮಗಳು ಮುಂದೆ ಹೆಚ್ಚು ಹೆಚ್ಚು ನಡೆಯಲು ಪ್ರೋತ್ಸಾಹಿಸುವೆ ಎಂದು ನುಡಿದರು ಅಲ್ಲದೇ ಈ ಕಾಲವೇ ಮಠದಲ್ಲಿ ಹಲವಾರು ಶಿವಶರಣರು ಜಂಗಮರು ಶಿವಪೂಜೆ ಮಾಡುವುದರ ಮೂಲಕ ವಿಶೇಷವಾದ ಶಕ್ತಿಯನ್ನು ನೀಡಿದ್ದು ಶ್ರೀಮಠವು ನೂತನ ಕಟ್ಟಡವನ್ನು ಕಟ್ಟಬೇಕಾಗಿದೆ
ಮಠಕ್ಕೆ ಬರುವಂತ ಭಕ್ತರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಹಾಗೂ ದಾಸೋಹ ಭವನ ನಿರ್ಮಾಣದೊಂದಿಗೆ ಹಳೆಯ ಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಾಗಿದ್ದು ಭಕ್ತರೆಲ್ಲರು ಶ್ರೀಮಠದೊಂದಿಗೆ ಸದಾ ಸಹಕಾರಿಯಾಗಬೇಕೆಂದು ತಿಳಿಸಿದರು
ಕವಿಗಳಿಗೆ ಮಠಗಳ
ಶ್ರೀಗಳ ಆಶೀರ್ವಾದ
ಸಹಕಾರ ಅತ್ಯಮೂಲ್ಯವಾದದ್ದು
ಸಾಹಿತ್ಯ ಮತ್ತು ಧಾರ್ಮಿಕತೆ ಹೆಚ್ಚು ಹೆಚ್ಚು ಜನರಲ್ಲಿ ವೈಜ್ಞಾನಿಕ ಹಾಗೂ ಸಾಹಿತ್ಯ ಚಿಂತನೆ ಬೆಳೆಯಲು ಸಹಕಾರಿಯಾಗಿದ್ದಾರೆ ಕವಿಗಳು ನಾಡಿನ ಪರಿಸರ ಸಾಮಾಜಿಕ ಪ್ರಜ್ಞೆ,ಪ್ರಜ್ಞೆಯ ಅರಿವನ್ನ ಮೂಡಿಸುತ್ತಿದ್ದು ಮೂಢನಂಬಿಕೆಗಳ ನಿರ್ಮೂಲನೆಗೆ ಕವನಗಳನ್ನು ರಚಿಸುವ ಮೂಲಕ ಜನರಲ್ಲಿ ಏಕತೆ ಮತ್ತು ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಎಂದು
ಡಾ,ಕೆ.ಬಿ.ಸದಾನಂದ ಆರಾಧ್ಯ
ಕವಿಗೋಷ್ಠಿ ಅಧ್ಯಕ್ಷತೆಯಲ್ಲಿ
ನುಡಿದರು
ಹಿರಿಯ ಚಿಂತಕರಾದ
ಸಾರಂಗಿ ಜಯಣ್ಣ ಸಾಹಿತ್ಯ ಹಾಗೂ ಧರ್ಮಿಕತೆ, ಜನರಲ್ಲಿ ಜಾಗೃತರಾಗಬೇಕು ಭಕ್ತಿ ಮಾರ್ಗದಲ್ಲಿ ನಡೆದರೆ ಎಲ್ಲವೂ ಕೂಡ ನಮ್ಮದಾಗುತ್ತದೆ ಎಂದರು.
ಸಾಹಿತ್ಯ ಅತ್ಯಮೂಲ್ಯವಾದದ್ದು ಅದಕ್ಕೆ ಎಲ್ಲರೂ ಹೆಚ್ಚಿನ ಹೊತ್ತನ್ನು ನೀಡುವುದರ ಮೂಲಕ ವಿಚಾರವಂತರಾಗಬೇಕು ನಡೆದಾಡುವ ದೈವವೆಂದೆ ಹೆಸರಾದ ಶಿವಕುಮಾರ ಮಹಾಸ್ವಾಮಿಗಳ ಆದರ್ಶ ನಮ್ಮೆಲ್ಲರಿಗೆ ಭಕ್ತಿ ಮಾರ್ಗದ ದಿಕ್ಸೂಚಿಯಾಗಿ ಮುನ್ನಡೆಸುತ್ತಿದೆ ಎಂದು ಕಾರ್ಯಕ್ರಮದಲ್ಲಿ
ಉಪನ್ಯಾಸ ಮಾಡಿದ
ಹಿರಿಯ ಸಾಹಿತಿ ಬಿದಲೂರು ಸೋಮಣ್ಣ ತಿಳಿಸಿದರು
ಮಾಜಿ ಸೈನಿಕರಾದ ಸುರೇಶ್ ಅವರು ಮಾತನಾಡಿ ಸಾಮಾಜಿಕ ಮೌಲ್ಯಗಳಿಗೆ ಇಂತಹ ಸಾಹಿತ್ಯ ಕಾರ್ಯಕ್ರಮಗಳು ಪ್ರಮುಖವಾದದ್ದು ದೇಶ ಸೇವೆ ಹಾಗೂ ರೈತ ಸೇವೆ ಈ ದೇಶಕ್ಕೆ ಬೆನ್ನೆಲುಬಾಗಿದೆ ಇಂದಿನ ಯುವಜನತೆ ಹೆಚ್ಚು ಹೆಚ್ಚು ಸೈನ್ಯಕ್ಕೆ ಸೇರಬೇಕು ಹಾಗಾಗಿ ಕೇಂದ್ರ ಸರ್ಕಾರವು ಯುವಜನತೆಗಾಗಿ ಅಗ್ನಿವೀರ್ ಮೂಲಕ ಭಾರತೀಯ ಸೈನ್ಯಕ್ಕೆ ಯುವಜನತೆಗಾಗಿ ಅವಕಾಶ ಮಾಡಿಕೊಟ್ಟಿದೆ ದೇಶವು ಭದ್ರತೆಯಲ್ಲಿದ್ದರೆ ನಾವೆಲ್ಲರೂ ನೆಮ್ಮದಿಯಾಗಿರಬಹುದು ಎಂದು ಹೇಳಿದರು
ಕವಿಗೋಷ್ಠಿಯಲ್ಲಿ
ಪ್ರಜಾಕವಿ ಎನ್.ಆರ್. ನಾಗರಾಜ್,
ಆನಂದ್. ವೈ.ಮೌರ್ಯ, ಚಿಕ್ಕನಹಳ್ಳಿ ಕೃಷ್ಣಯ್ಯ,
ಸಿರಾಜ್ ಅಹಮದ್, ಸೇರಿದಂತೆ ಕವಿಗಳು ಅಮೂಲ್ಯವಾದ ಕವಿತೆಗಳನ್ನು ರಚಿಸಿ ವಾಚನ ಮಾಡಿದರು ಕಾರ್ಯಕ್ರಮದ ನಿರೂಪಣೆಯನ್ನು
ರೇಣುಕ ಪ್ರಸಾದ್ ನಿರ್ವಹಿಸಿದರೆ ಕಾರ್ಯಕ್ರಮದಲ್ಲಿ
ಹರ ಗುರು ಚರಮೂರ್ತಿಗಳು ಆಗಮಿಸಿದ್ದರು ,
ಬೆಂಗಳೂರಿನ
ವಚನ ಗಾಯನ ಮಾಡಿದ ಜ್ಞಾನಸಂಗಮ ತಂಡ ಪುಷ್ಬಾ ಸುರೇಶ್ ಅದ್ಭುತವಾದ ವಚನ ಗಾಯನಕ್ಕೆ ಸಾಕ್ಷಿಯಾದರು
ವರದಿ
ಆನಂದ್. ವೈ. ಮೌರ್ಯ