ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು–ಸಿದ್ದಲಿಂಗ ಶ್ರೀ

ನೆಲಮಂಗಲ :ಜಾನಪದ ಕಲೆಗಳು ಉಳಿಸಿ ಬೆಳೆಸಲು ಸರಕಾರ ಹೆಚ್ಚಿನ ಅನುದಾನ ನೀಡುತ್ತಿದ್ದು ಕೆಲವರು ಸರಿಯಾಗಿ ಬಳಕೆ ಮಾಡಿಕೊಂಡು ಜನರಿಗೆ ತಲುಪಿಸಿದರೆ ಅನೇಕರು ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಸಭಾಂಗಣದಲ್ಲಿ
ಸಿಂಚನ ಕಲಾಕೇಂದ್ರ ಟ್ರಸ್ಟ್ ಹಾಗೂ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಲಾಗಿದ್ದ
ಜಾನಪದ ಸಿರಿ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆ ಪ್ರಸ್ತುತ ಸಮಾಜಕ್ಕೆ ಸರಿ ತಪ್ಪುಗಳ ಪಾಠ ಪಾಠ ಶಾಲೆಯಾಗಿದ್ದು ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಿದೆ
ವಿದ್ಯಾರ್ಥಿಗಳ ಮುಂದಿನ ಅವಕಾಶಗಳಿಗೆ ಆಧ್ಯತೆ ಸಿಗಬೇಕಾದರೆ ಇಂದಿನ ಸಮಯ ಬಹಳ ಮುಖ್ಯವಾಗಲಿದೆ. ಸಿನಿಮಾಗಳಿಗಿಂತ ಜಾನಪದ ಕಲೆ, ಸಾಹಿತ್ಯದಲ್ಲಿ ಹೆಚ್ಚು ಆಧ್ಯತೆ ನೀಡಬೇಕು.
ಕಲೆ,ಸಂಸ್ಕೃತಿ ಬೆಳೆಸುವ ಜವಾಬ್ದಾರಿ ಹೆಣ್ಣು ಮಕ್ಕಳಿಗಿದೆ. ಸಿಂಚನ ಕಲಾಕೇಂದ್ರದ ನೇತೃತ್ವದಲ್ಲಿ 20 ದಿನದಿಂದ ಮಠದ ವಿದ್ಯಾರ್ಥಿಗಳಿಗೆ ಜಾನಪದ ಕಲಾ ಪ್ರಕಾರಗಳಲ್ಲಿ ಭಾಗವಹಿಸಲು ತರಬೇತಿ ನೀಡಿರುವುದು ಸಂತೋಷದ ಸಂಗತಿ ಕಳೆದು ಸುಮಾರು ವರ್ಷಗಳಿಂದ ಸಿಂಚನ ಕಲಾ ಕೇಂದ್ರವು ಹತ್ತು ಹಲವು ಕಾರ್ಯಕಮ ಮಾಡುತ್ತಿದೆ ಎಂದರು.

ಜಾನಪದ ಸಂಭ್ರಮ ಸಂತವಾಣಿ ತಂಡದಿಂದ ಜಾನಪದ ಝಂಕಾರ, ಯಶೋಧ ತಂಡದಿಂದ ಭಾವಗೀತೆ,
ಅರ್ಚನ ಕುಲಕರ್ಣಿ ತಂಡದಿಂದ ಭಕ್ತಿ ಸಂಗೀತ, ತ್ರಿವೇಣಿ ತಂಡದಿಂದ ಸುಗಮ ಸಂಗೀತ,ರಾಮು ತಂಡದಿಂದ ಕೋಲಾಟ,ಪವನ್ ತಂಡದಿಂದ ಮೂಲಜಾನಪದ ಗೀತೆ ಗಾಯನ,ಮೇಘನ ತಂಡದಿಂದ ಜನಪದ ನೃತ್ಯ, ಪೂರ್ವಿಕ ತಂಡದಿಂದ ಕೋಲಾಟ, ಯಶೋಧ ತಂಡದಿಂದ ಸುಗ್ಗಿ ಕುಣಿತ,
ಖುಷಿ ತಂಡದಿಂದ ದೇಸಿ ಜಾನಪದ ನೃತ್ಯ,ಇದೆ ಸಂದರ್ಭದಲ್ಲಿ ಚೌಡಿಕೆ ಕಲಾವಿದ ಚೇತನ್ ಹಾಗೂ ಕಲಾವಿದ ನಾಗೇಶ್ ಜಂಬ್ಬೆ ವಾದನ ನುಡಿಸುವುದರ ಮೂಲಕ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ನಡೆಸಲಾಯಿತು.

ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು, ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್ ಮೂರ್ತಿ, ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್, ನಿವೃತ್ತ ಉಪನಿರ್ದೇಶಕ ಎಂ.ವಿ ನೆಗಳೂರು,
ನಿವೃತ್ತ ಪ್ರಾಂಶುಪಾಲ ಭೋಗಣ್ಣ,ಬಸವೇಶ್ವರ ಮಹಿಳಾ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ
ರುದ್ರಮಹೇಶ್, ಸಿಂಚನಕಲಾಕೇಂದ್ರ ಅಧ್ಯಕ್ಷ ಸಿದಯ್ಯ.ಸಿ.ಹೆಚ್,
ಖ್ಯಾತ ಕರ್ನಾಟಕ ಸಂಗೀತ ಶಿಕ್ಷಕಿ ಪ್ರೇಮರಾಮಮೂರ್ತಿ, ಖ್ಯಾತ ಹಿಂದೂಸ್ಥಾನಿ ಗಾಯಕ ಅರ್ಚನ ಕುಲಕರ್ಣಿ,
ಪ್ರೆಸ್ ಕ್ಲಬ್ ನಗರ ಅಧ್ಯಕ್ಷ ಭಾನುಪ್ರಕಾಶ್,ಕಸಪಾ ನಗರ ಅಧ್ಯಕ್ಷ ಮಲ್ಲೇಶ್, ಪದಾಧಿಕಾರಿ ಇಸ್ತೂರು
ಬೈಲೇಗೌಡ,ಪ್ರಜಾಕವಿ ನಾಗರಾಜು,ಆನಂದ್. ವೈ ಮೌರ್ಯ,ಸರಸ್ವತಿ, ಚೌಡಿಕೆ ಕಲಾವಿದ ಚೇತನ್, ಜಂಬೆ ನವೀನ್ ಕುಮಾರ್, ಪವನ್ ಕುಮಾರ್ ಮತ್ತಿತರರಿದ್ದರು.