ಪ್ರಜಾಪ್ರಭುತ್ವದ ಉಳಿವು ನಮ್ಮ ಮತದಾನದಿಂದ ಮಾತ್ರ ಸಾಧ್ಯ. ಮಂಜುನಾಥ್ ಪ್ರಸನ್ನ

ಚಾಮರಾಜನಗರ:ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಕ್ಷರತಾ ಮತದಾರರ ಸಂಘ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬಾಲಕರ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ. ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಪ್ರಬಂಧ, ರಸಪ್ರಶ್ನೆ, ಭಿತ್ತಿ ಚಿತ್ರ, ಚರ್ಚಾ ಸ್ಪರ್ಧೆ ಮತ್ತು ನಾಟಕ ಸ್ವರ್ಧೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾದ ಮಂಜುನಾಥ್ ಪ್ರಸನ್ನರವರು ಉದ್ಘಾಟಿಸಿ ಮಾತನಾಡಿ. ಪ್ರಜಾಪ್ರಭುತ್ವ ಉಳಿವು ನಮ್ಮ ಮತದಾನದಿಂದ ಮಾತ್ರ ಸಾಧ್ಯ. ತಿಳಿದು ಮತ ಚಲಾಯಿಸಬೇಕು. ಭಾರತದ ಎಲ್ಲಾ ಪ್ರಜೆಗಳು ಮತದಾನ ಮತ್ತು ಸಂವಿಧಾನ ಗಳ ಬಗ್ಗೆ ತಿಳಿಯಬೇಕು.

ಜನವರಿ 25 ಮತದಾರರ ದಿನವೆಂದು ಆಚರಿಸಲಾಗುತ್ತದೆ. ಮತದಾನ ಜಾಗೃತಿಗೋಸ್ಕರ ಕೇಂದ್ರ ಚುನಾವಣಾ ಆಯೋಗ ಮತದಾರರ ಸಾಕ್ಷರತಾ ಸಮಿತಿಯ ಮೂಲಕ ಭಾರತದ ಎಲ್ಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮುಂದಾಗಿದೆ. ಮತದಾರರು ಯಾವುದೇ ಆಸೆ ಮತ್ತು ಆಮಿಷಗಳಿಗೆ ಒಳಗಾಗಬಾರದು. ಯಾವುದೇ ಪಕ್ಷಕ್ಕೆ ಗುಲಾಮರಾಗಬಾರದು ಶಾಲಾಹಂತದಿಂದ ಕಾಲೇಜು ಹಂತದವರೆಗೆ ಅರಿವು ಅಗತ್ಯವಾಗಿದೆ. ಮತದಾನದ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದು ತಾವು ಕೂಡ ಇತರಿಗೆ ತಿಳಿಸಿದರೆ ಮಾತ್ರ ಪ್ರಬುಧ್ಧಭಾರತವನ್ನು ಕಾಣಬಹುದು ಎಂದು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಆಯ್ಕೆಯಾದವರು. ಆಂಗ್ಲ‌ಮಾಧ್ಯಮದಲ್ಲಿ ಪ್ರಬಂಧದಲ್ಲಿ ಮೌನ ಎಚ್ ಬಿ. ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜು ಗುಂಡ್ಲುಪೇಟೆ, ದ್ವಿತೀಯ ಸ್ಥಾನ ಮಂಥನ್ ಎಂ ಎನ್ .ನಿಸರ್ಗ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ.
ತೃತೀಯ ಮಹಮ್ಮದ್ ಸೌದ್. ವಿದ್ಯಾ ವಿಕಾಸ್ ಪದವಿ ಪೂರ್ವ ಕಾಲೇಜು ಚಾಮರಾಜನಗರ.

ಕನ್ನಡ ಮಾಧ್ಯಮದಲ್ಲಿ ಪ್ರಬಂಧ ನೀಲಾವತಿ. ಸರ್ಕಾರಿ ಪದವಿ ಪೂರ್ವ ಕಾಲೇಜು ಗುಂಡ್ಲುಪೇಟೆ, ದ್ವಿತೀಯ ನಿಂಗರಾಜಮ್ಮ ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜು ಯಳಂದೂರು.ತೃತೀಯ ಮಂಜುಳ ಆರ್ ಸರ್ಕಾರಿ ಪದವಿ ಪೂರ್ವ ಕಾಲೇಜು ಯಳಂದೂರು.

ಚರ್ಚಾ ಸ್ಪರ್ಧೆ ಪ್ರಥಮ ಧನುಶ್ರೀ ಕೆ ವಾಸವಿ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ. ದ್ವಿತೀಯ ಶ್ವೇತಾ ಎಂ ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜು ಯಳಂದೂರು. ತೃತೀಯ ಮಂಗಳಗೌರಿ ಕೆ ಎಸ್ ಎನ್ ಪದವಿ ಪೂರ್ವ ಕಾಲೇಜು ಗುಂಡ್ಲುಪೇಟೆ.

ರಸಪ್ರಶ್ನೆ ಪ್ರಥಮ ನಾಗೇಂದ್ರ ಸಿ ಮತ್ತು ಸಂಜು ಪಿ ವಿದ್ಯಾವಿಕಾಸ್ ಪದವಿ ಪೂರ್ವ ಕಾಲೇಜು ಚಾಮರಾಜನಗರ. ದ್ವಿತೀಯ ಜ್ಯೋತಿ ಮತ್ತು ಮಮತಾ ಗುಂಡ್ಲುಪೇಟೆ.

ಭಿತ್ತಿ ಚಿತ್ರ ಪ್ರಥಮ.ಸ್ನೇಹ ಸರ್ಕಾರಿ ಪದವಿ ಪೂರ್ವ ಕಾಲೇಜು ಗುಂಡ್ಲುಪೇಟೆ. ದ್ವಿತೀಯ ಮೈಲಾ. ಜಿ ವಿ ಗೌಡ ಸರಕಾರಿ ಪದವಿ ಪೂರ್ವ ಕಾಲೇಜು ಹನೂರು.ತೃತೀಯ ಕುಮಾರಿ. ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜು ಯಳಂದೂರು.
ನಾಟಕ ಪ್ರಥಮ ಎಸ್ ವಿ ಕೆ ಕಾಲೇಜು ಕೊಳ್ಳೇಗಾಲ.

ಈ ಸಂದರ್ಭದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೋಮಣ್ಣ, ಇ ಎಲ್ ಸಿ ಸಂಚಾಲಕರಾದ. ಶಿವಸ್ವಾಮಿ, ಸುದರ್ಶನ್ ,ರಾಬರ್ಟ್ ಧನರಾಜ್ , ಮಹೇಂದ್ರ, ಉಪನ್ಯಾಸಕರಾದ ಶಾಂತರಾಜು, ಮಹದೇವಸ್ವಾಮಿ, ರಾಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ