ಮಹಿಳೆ ನಿಗೂಢ ಸಾವು

ನೆಲಮಂಗಲ:ಸ್ನಾನ‌ ಮಾಡಲು ತೆರಳಿದ್ದ ಮಹಿಳೆಯೊಬ್ಬಳು ನಿಗೂಢವಾಗಿ ಮೃತ ಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಂದ್ರ ಪ್ರದೇಶದ ತಿರುಪತಿ ನಿವಾಸಿ ಲಕ್ಷ್ಮೀ (25) ಮೃತ ಮಹಿಳೆ.‌
ಕಳೆದ ನ.23 ರಂದು ಆಂದ್ರ ಪ್ರದೇಶದ ತಿರುಪತಿಯಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಖಾಸಗಿ ಕಾರ್ಯಕ್ರಮ ನಿಮಿತ್ತವಾಗಿ ನೆಲಮಂಗಲ ನಗರದ ಅಡೇಪೇಟೆಯ ಸಂಬಂಧಿಕರಾದ ಸುಹಾನಿ ಎಂಬಾತರ ಮನೆಗೆ ದಂಪತಿ ಸಮೇಪ ಬಂದಿರು.ನ.24 ರಂದು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಲಕ್ಷ್ಮೀ ಸ್ನಾನ ಮಾಡಲು ಸ್ನಾನಕ್ಕೆ ತೆರಳಿದ್ದು 20 ನಿಮಿಷವಾದರೂ ಹೊರ ಬಾರದ ಹಿನ್ನಲೆ
ಪತಿ ವೆಂಕಟಸ್ವಾಮಿ ಸ್ನಾನ ಕೊಠಡಿ ಬಳಿಗೆ ತೆರಳಿ ನೋಡಿದ್ದಾಗ
ಪತ್ನಿ‌ ಲಕ್ಷ್ಮೀ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದಳು.ಬಳಿಕ ಪತಿ ವೆಂಕಟಸ್ವಾಮಿ ಸಂಬಂಧಿಕರಿಗೆ ತಿಳಿಸಿದ್ದು ಬಿನ್ನಮಂಗಲ ಬಳಿಯ ಖಾಸಗಿ ಆಸ್ಪತ್ರೆ ರವಾನಿಸಿದ್ದು ಆಸ್ಪತ್ರೆ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಳಿಕ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು‌ ನಗರದ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ರವಾನಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸ್ ಠಾಣೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ಮಹಿಳೆ ನಿಗೂಢ ಸಾವು ಮನೆಯಲ್ಲಿ ಎಲ್ಲಾರು ಇದ್ದಾಗ ಸ್ನಾನಕ್ಕೆ ಹೋದಾ ಮಹಿಳೆ ಕೆಲವೇ ನಿಮಿಷದಲ್ಲಿ ಮೃತ ಪಟ್ಟಿದ್ದಾಳೆ ಸ್ನಾನಕ್ಕೆ ಹೋಗುವ ಮುನ್ನ ಲಕ್ಷ್ಮೀ ಮುಖಕ್ಕೆ ಏನು ಆಗಿದ್ದಿಲ್ಲ
ಸ್ನಾನಗೃಹದಲ್ಲಿ ಲಕ್ಷ್ಮಿ ಬಿದ್ದಿದ್ದ ಮಹಿಳೆ
ಸ್ನಾನಕ್ಕೆ ಹೋದಾ ಮಹಿಳೆಯ ಮುಖಕ್ಕೆ ಪರಚಿದ ಗಾಯವಾಗಿದೆ.ಮನೆಯಲ್ಲಿ ಯಾರು ಬಂದಿಲ್ಲ ಸ್ನಾನದ ಮನೆಯಲ್ಲಿ ಗ್ಯಾಸ್ ಗೀಸರ್ ಆನ್ ಆಗಿಲ್ಲಾ
ಬಕೇಟ್​​ನಲ್ಲಿ ನೀರು ತುಂಬಿಸಿಲ್ಲ ಲಕ್ಷ್ಮೀ ನಿಗೂಢವಾಗಿ ಮೃತ ಪಟ್ಟಿದ್ದಾಳೆಂದು ಕುಟುಂಬಸ್ಥರು ತಿಳಿಸಿದ್ದಾರೆ.‌

ವರದಿ
ವೈ.ಆನಂದ್ ಮೌರ್ಯ