ಕನ್ನಡ ಸಾಹಿತ್ಯವು ಮನೆಗೂ ತಲುಪಬೇಕು–ಪ್ರಕಾಶ್ ಮೂರ್ತಿ
ನೆಲಮಂಗಲ:ಕನ್ನಡ ಸಾಹಿತ್ಯವು ಅತ್ಯಂತ ಪ್ರಪ್ರಥಮವಾಗಿ ಬೆಳೆಯಬೇಕು ಮನೆಮನೆಗೂ ತಲುಪಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬೈರನಹಳ್ಳಿ ಪ್ರಕಾಶ್ ಮೂರ್ತಿ ತಿಳಿಸಿದರು
ತಾಲ್ಲೂಕಿನ ಸೋಂಪುರದ
ಕನ್ನಡ ಸರಕಾರಿ ಪ್ರಾಥಮಿಕ ಶಾಲೆ ಆಯೋಜಿಸಿದ್ದ 50 ರ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಶಾಲೆಯಿಂದ ಶಾಲೆಗೆ ಸಾಹಿತ್ಯ ಸಂಚಾರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಭಾಷಾಭಿಮಾನ ಮೂಡಬೇಕು ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ ಎಂದು ಹೇಳಿದರು
ಆ ನಿಟ್ಟಿನಲ್ಲಿ ಕನ್ನಡ ಶಾಲೆಗಳು ಇನ್ನು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಬೇಕು
ನಾಡ ಅಭಿಮಾನ ದೇಶ ಅಭಿಮಾನ ಭಾಷಾಭಿಮಾನವನ್ನು ಬೆಳೆಸುವುದರಲ್ಲಿ ಅತ್ಯುತ್ತಮವಾದ ಕಾರ್ಯವನ್ನು ಮಾಡುತ್ತಿವೆ ಎಂದು ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ
ಕೆ.ಬಿ.ಸದಾನಂದ ಆರಾಧ್ಯ ಆಶಯ ನುಡಿ ಮಾತನಾಡಿದರು
ಶಾಲೆಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಕನ್ನಡದ ಪುಸ್ತಕಗಳನ್ನು ಓದಬೇಕು ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಕವಿಗಳನ್ನು ಸ್ಮರಿಸಬೇಕು ನೀವೆಲ್ಲರೂ ಕವಿಗಳಾಗಬೇಕು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಎಲ್ಲ ಮಕ್ಕಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು
ಉಪನ್ಯಾಸವಹಿಸಿ ಮಾತನಾಡಿದ ಸಿದ್ದಗಂಗಾ ಪ್ರಥಮ ದರ್ಜೆ ಪದವಿ ಕಾಲೇಜ್ ಪ್ರಾಧ್ಯಾಪಕರಾದ ಡಾ. ಗಂಗರಾಜು
ಮಕ್ಕಳಲ್ಲಿ ತಾಯಿಯ ಪಾತ್ರ ಬಹು ಮುಖ್ಯವಾಗಿದ್ದು ಕನ್ನಡ ಭಾಷೆ ನಾಡು ನಾಡ ನುಡಿ ಮತ್ತು ನಿಮ್ಮ ಭಾಷೆಯ ಪ್ರೇಮವನ್ನು ಹೆಚ್ಚು ಹೆಚ್ಚು ಬೆಳೆಸಿಕೊಂಡಾಗ ನಮ್ಮ ನಾಡು ನಮ್ಮ ನುಡಿ ಸಂಸ್ಕೃತಿಯಾಗಿ ಬೆಳವಣಿಗೆಯಾಗುತ್ತದೆ ಆ ನಿಟ್ಟಿನಲ್ಲಿ ಎಲ್ಲಾ ಮಕ್ಕಳು ಹೆಚ್ಚು ಹೆಚ್ಚು ಕನ್ನಡ ನುಡಿಯ ಪುಸ್ತಕಗಳನ್ನು ಓದಿ ನಾಡ ಅಭಿಮಾನವನ್ನು ಭಾಷಾಭಿಮಾನವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ
ಹೊನ್ನ ಶಾಮಯ್ಯನವರು ಮಾತನಾಡಿ ಮಕ್ಕಳು ಕನ್ನಡ ಪ್ರೇಮ ಕನ್ನಡ ಭಾಷೆ ಹಾಗೂ ದೇಶಾಭಿಮಾನ ವನ್ನು ತಾವುಗಳು ಬೆಳೆಸಿಕೊಂಡಾಗ ಭಾಷೆಗೆ ನಾಡಿಗೆ ಗೌರವವನ್ನು ಕೊಟ್ಟ ಹಾಗೆ ಎಂದು ಹೇಳಿದರು ಕ. ಸಾ. ಪ.ಸೋಂಪುರ ಹೋಬಳಿ ಘಟಕದ ಅಧ್ಯಕ್ಷರಾದ ನರಸಿಂಹರಾಜು ಮಾತನಾಡಿ ಮಕ್ಕಳು ಹೆಚ್ಚು ಪುಸ್ತಕವನ್ನು ಓದಿ ಹಿರಿಯರಿಗೆ ಗೌರವ ನೀಡಿ ನೀವು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಿರಿ ಎಂದು ಹೇಳಿದರು
ಬಹುಮಾನ ವಿತರಣೆಯನ್ನು ಚೆನ್ನಾoಬ ಪ್ರಕಾಶನಮಾಲೀಕರಾದ ಭಾರತೀಪುರ ಕೆಂಪಣ್ಣನವರು ಎಲ್ಲಾ ಮಕ್ಕಳಿಗೆ ಪುಸ್ತಕ ಗಳನ್ನು ವಿತರಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ
ಕ.ಸಾ.ಪ ಪ್ರತಿನಿಧಿ ಮಂಜುಳಾ ಸಿದ್ದರಾಜು ಮುಖ್ಯ ಶಿಕ್ಷಕರಾದ ಚಿಕ್ಕಣ್ಣ,ವೀರಸಾಗರ ಭಾನುಪ್ರಕಾಶ್ ಗೌರವ ಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ ನೆಲಮಂಗಲ ಹಾಗೂ ಶಾಲೆಯ ಶಿಕ್ಷಕರಾದ ಈಶ್ವರ.ಆರ್ ಎಸ್,ಕುಮಾರಪ್ಪ ಭೂಮಿಕಾ ಸ್ಟುಡಿಯೋ,ಬೂದಿಹಾಲ್ ಕಿಟ್ಟಿ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಮಾಜಿ ಅಧ್ಯಕ್ಷರಾದ ಸುರೇಶ್, ಮುಖ್ಯಶಿಕ್ಷಕರಾದ ಷಣ್ಮುಖಚಾರಿ, ಹಾಗೂ ಶಿಕ್ಷಕಿ ಸೌಭಾಗ್ಯ, ಶಿಕ್ಷಕರಾದ ರಂಗಮೂರ್ತಿ ಈಶ್ವರಯ್ಯ, ಆರ್ ಎಸ್, ದೇವಿಕಾ ಏನ್, ಮಮತ, ಆನಂದಮೂರ್ತಿ, ನಂದೀಶ್ ಮೋಹನಕುಮಾರ್ ರೂಪ ಸುಜಾತಾ ಬಿರಾದಾರ್,ಉಜ್ಮಾ ಪಾತಿಮಾ, ಸೌಮ್ಯ ಹಾಗೂ ಮಕ್ಕಳು ಪೋಷಕರು ಉಪಸ್ಥಿತರಿದ್ದರು.
ವರದಿ.ವೈ.ಆನಂದ್ ಮೌರ್ಯ