ಕನ್ನಡ ಜ್ಯೋತಿ ರಥದ ಆಗಮನಕ್ಕೆ ಪೂರ್ವ ಬಾವಿ ಸಿದ್ದತೆ
ನೆಲಮಂಗಲ:87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡದ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ ಯಶಸ್ವಿಗೊಳಿಸುವುದು ನಾಗರೀಕರೆಲ್ಲರ ಜವಾಬ್ದಾರಿ
ಮತ್ತು ಇಂದಿನ ಸಭೆಗೆ ತಾಲ್ಲೂಕಿನ ಅಧಿಕಾರಿಗಳು ಗೈರಾಗಿರುವುದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯವಾದುದು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಡಿ. ಸಿದ್ದರಾಜು ತಿಳಿಸಿದರು
ರಾಜ್ಯಾದ್ಯಂತ ಸಂಚರಿಸಲಿರುವ
ಕನ್ನಡದ ಜ್ಯೋತಿ ಕನ್ನಡದ
ರಥವನ್ನು ಸ್ವಾಗತಿಸುವ ಸಲುವಾಗಿ ತಾಲ್ಲೂಕು ಆಡಳಿತ ಯಶಸ್ವಿಗೊಳಿಸಲು ತಾಲ್ಲೂಕು ಕಛೇರಿಯಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲ್ಲೂಕು ತಹಸೀಲ್ದಾರ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಅಮೃತ್ ಅತ್ರೆಶ್ ರವರ ಅಧ್ಯಕ್ಷತೆಯಲ್ಲಿ ಕರೆದ ಸಭೆಗೆ
ತಾಲ್ಲೂಕಿನ ಬೆರೆಳೆಣಿಕೆ ಅಧಿಕಾರಿಗಳು ಬಾಗವಹಿಸಿದ್ದು, ಜವಾಬ್ದಾರಿಗಳನ್ನು ಹೊಂದಿರುವ ಅಧಿಕಾರಿಗಳು
ಹಾಜರಾಗದಿರುವುದು ಬೇಸರದ ಸಂಗತಿ ಬಾಗವಹಿಸದೇ ಇರುವುದು ಖಂಡನೀಯ.
ಇಂತಹ ಅಧಿಕಾರಿಗಳ ಮೇಲೆ ಶಿಸ್ತುಕ್ರಮವನ್ನು ಜರುಗಿಸದೆ ಇರುವುದು ತಹಸೀಲ್ದಾರ ರವರ ನಡೆಯೂ ಸಹ ಖಂಡನೀಯವಾದದ್ದು
ಅಧಿಕಾರಿಗಳ ಗೈರು ಹಾಜರಿ ಇಂದು ನೆನ್ನೆಯದಲ್ಲ
ಎಲ್ಲಾ ಪೂರ್ವಭಾವಿ ಸಭೆಗಳು ಮತ್ತು ಜಯಂತಿಗಳಲ್ಲಿಯು ಕಾಣಿಸುತ್ತಿದೆ ಕನಕದಾಸರ ಜಯಂತಿಯಲ್ಲಿಯೂ ನಾಲ್ಕೈದು ಮಂದಿ ಅಧಿಕಾರಿಗಳು ಭಾಗವಹಿಸಿದ್ದರು.
ಈ ನಡೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದರು
ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಬಿ.ನರಸಿಂಹಯ್ಯ ಮಾತನಾಡಿ
ತಹಸೀಲ್ದಾರ ರವರು ಪ್ರತಿಭಾರಿಯೂ ಅಧಿಕಾರಿಗಳ ಗೈರು ಹಾಜರಿಯನ್ನು ಲಘುವಾಗಿ ಪರಿಗಣಿಸುತ್ತಾರೆ. ತಾಯಿ ಭುವನೇಶ್ವರಿಗೆ ಬೆಲೆಯೇ ಇಲ್ಲವೇ ಎಂದರು.
ಪೂರ್ವಭಾವಿ ಸಭೆಯಲ್ಲಿ ಬಾಗವಹಿಸಿದ್ದ ಕ. ಸಾ. ಪ. ಅಧ್ಯಕ್ಷ ಪ್ರಕಾಶ್ ಮೂರ್ತಿ, ಗೌರವ ಕಾರ್ಯದರ್ಶಿ ವೀರಸಾಗರ ಬಾನುಪ್ರಕಾಶ್, ಮುಖಂಡರುಗಳಾದ ಗಂಗಾಧರ್. ಪಿ.
ಅರುಣ್ ಕುಮಾರ್,
ಮಹರ್ಷಿ ವಾಲ್ಮೀಕಿ
ಜನಜಾಗೃತಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎ. ದಿಲೀಪ್ ಕುಮಾರ್,
ಕನ್ನಡ ಸಂಸ್ಕೃತಿ ರಂಗದ ಅಧ್ಯಕ್ಷರಾದ
ಡಿ.ಸಿದ್ದರಾಜು ಮತ್ತು
ನಮ್ಮ ಕರ್ನಾಟಕ ಜನ ಸೈನ್ಯ ರಾಜ್ಯದ್ಯಕ್ಷ ಡಾ.ಬಿ. ನರಸಿಂಹಯ್ಯ ಇವರುಗಳು ಸಭೆಯನ್ನು ಭಹಿಸ್ಕರಿಸಿ ಹೊರನಡೆದರು.