1. ಸೋಷಿಯಲ್ ಮೀಡೀಯಾಗಳಿಂದ ಸುಳ್ಳು ಸುದ್ದಿಗಳು ಹೆಚ್ಚಾಗಿದ್ದು ಇದು ಪತ್ರಿಕಾ ರಂಗಕ್ಕೆ ಕಳಂಕ ತರುವಂತಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷ ಶಿವಾನಂದ ತಗಡೂರು ರವರು ಅಭಿಪ್ರಾಯ ಪಟ್ಟರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ವಿ ಎಸ್ ಆರ್ ಕನ್ವೆಂಷನ್ ಹಾಲ್ ನಲ್ಲಿ ನೆಡೆದ ದೇವನಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಾಲಿಗೆ ಆಯ್ಕೆಯಾದ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸುದ್ದಿ ಮಾಡುವ ಭರದಲ್ಲಿ ಸತ್ಯಾ ಸತ್ಯತೆ ಹರಿಯದೆ ಬದುಕಿರುವರನ್ನು ಸಾಯಿಸುವುದು ಸತ್ತವರನ್ನು ಬದುಕಿಸುವುದು ಸುದ್ದಿಗಳೇ ಹೆಚ್ಚಾಗಿ ಬರುತ್ತಿವೆ ಮಾದ್ಯಮಗಳು ಸತ್ಯಾಸತ್ಯತೆ ಅರಿತು ಸುದ್ದಿ ಮಾಡಬೇಕೆಂದರು . ರಾಜ್ಯಪ್ರದಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿಗಳು ಆದ ಜಿ.ಸಿ ಲೋಕೇಶ್ ಮಾತನಾಡಿ ನೂತನ ಸಾಲಿಗೆ ಆಯ್ಕೆ ಯಾದ ಪದಾದಿಕಾರಿಗಳು ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಿ ಸಂಘದಲ್ಲಿ ಗುಂಪುಗಾರಿಕೆ ಮಾಡಬೇಡಿ 92 ವರ್ಷ ಇತಿಹಾಸವಿರುವ ಡಿ.ವಿ ಗುಂಡಪ್ಪನವರು ಸ್ಥಾಪನೆ ಮಾಡಿದ ಸಂಘವನ್ನು ಒಡೆಯಲು ಯಾರಿಂದಲೂ ಸಾದ್ಯವಿಲ್ಲ ಎಲ್ಲರು ಸಂಘದ ಅಭಿವೃದ್ಧಿಗೆ ಸಹಕರಿಸಲು ಮನವಿ ಮಾಡಿದರು IFWJ ರಾಷ್ಟ್ರೀಯ ಅದ್ಯಕ್ಷರಾದ ಬಿ ವಿ ಮಲ್ಲಿಕಾರ್ಜುನಯ್ಯರವರು ಮಾತನಾಡಿ ಸಂಘ ನಮ್ಮತನವನ್ನು ನಾವು ಉಳಿಸಿಕೊಳ್ಳುವ ಪ್ರಯತ್ನ ಮಾಡಿದಾಗ ಈ ಕ್ಷೇತ್ರ ಹೆಚ್ಚು ಬೆಳೆಯುತ್ತದೆ ಎಂದು ಅಬಿಪ್ರಾಯಪಟ್ಟರು ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾದ್ಯಕ್ಷ ಜಿ ಶ್ರೀನಿವಾಸ್ ವಹಿಸಿದ್ದರು ಸಮಾರಂಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಸಿ ಪಿ ಕುಸುಮಾ ಜಿಲ್ಲದ್ಯಕ್ಷ ಶ್ರೀನಿವಾಸ ಉಪಾದ್ಯಕ್ಷ ಮುರುಳಿ ಮೋಹನ್/ಮಂಜುನಾಥ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್ ರಮೇಶ್ ಖಜಾಂಚಿ ಶಾಂತಮೂರ್ತಿ ರಾಜ್ಯಸಂಘದ ನಾಮಿನಿ ಸದಸ್ಯರಾದ ದೇವರಾಜ್ ಮಾಜಿ ಜಿಲ್ಲಾದ್ಯಕ್ಷ ಮಂಡಿಬೆಲೆ ರಾಜಣ್ಣ ದೇವರಾಜ್ ಮುಂತಾದವರು ಬಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿನಾರಾಯಣ ಜಿ ಎಂ ರವರು ನೆರವೇರಿಸಿದರು ಇದೇ ಸಂಧರ್ಭದಲ್ಲಿ ರಾಜ್ಯ ಜಿಲ್ಲೆ ತಾಲ್ಲೋಕಿನ ಪದಾದಿಕಾರಿಗಳು ಮತ್ತು ಸದಸ್ಯರಿಗೆ ಸನ್ಮಾನ ಮಾಡಲಾಯಿತು..