ಸಿಎಂ ದೊಡ್ಡಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಹೋದ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್:ಬಿಜೆಪಿ ತಾಲ್ಲೂಕು ಮತ್ತು ನಗರ ಅಧ್ಯಕ್ಷರೂ ಸೇರಿದಂತೆ ಆರು ಮಂದಿ ನಗರಸಭಾ ಸದಸ್ಯರು ಕಾಂಗ್ರೆಸ್ ಪಾಲು
ಸಿಎಂ ರೋಡ್ ಶೋ ನಡೆಸಿ ಹೋದ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್:ಬಿಜೆಪಿ ತಾಲ್ಲೂಕು ಮತ್ತು ನಗರ ಅಧ್ಯಕ್ಷರೂ ಸೇರಿದಂತೆ ಆರು ಮಂದಿ ನಗರಸಭಾ ಸದಸ್ಯರು ಕಾಂಗ್ರೆಸ್ ಪಾಲು

ಬೆಂಗಳೂರು:ಸಿಎಂ ಪ್ರಚಾರಕ್ಕೆ ಬಂದು ಹೋದ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕಿಂಗ್ ನ್ಯೂಸ್ ಎದುರಾಗಿದೆ.

ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ನಗರ ಘಟಕದ ಬಿಜೆಪಿ ಅಧ್ಯಕ್ಷರು ಸೇರಿದಂತೆ ಆರು ಜನ ನಗರಸಭಾ ಸದಸ್ಯರು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು

ನಗರದಲ್ಲಿ ಭಾನುವಾರವಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ರೋಡ್ ನಡೆಸಿ ಮತಯಾಚನೆ ನಡೆಸಿದ್ದರು.

ಇಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜು, ನಗರ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯರೂ ಆದ ಶಿವಶಂಕರ್, ( ದೇವರಾಜನಗರ ವಾರ್ಡ್) ವೀರಭದ್ರನಪಾಳ್ಯ ವಾರ್ಡಿನ ಆರ್.ಶಿವಣ್ಣ, ಕನಕದಾಸನಗರ ಶಿವ ಎಂ, ತ್ಯಾಗರಾಜನಗರ ವಾರ್ಡಿನ ಸುಬ್ರಮಣಿ ಸಿದ್ದೇನಾಯಕನಹಳ್ಳಿ ವಾರ್ಡಿನ ಇಂದ್ರಾಣಿ ಹಾಗೂ ನಾಮ ನಿರ್ದೇಶಿತ ಸದಸ್ಯ ಶಿವಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಹಿರಿಯ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆಟಿ.ಕೃಷ್ಣಪ್ಪ, ರಾಜ್ಯ ಯುವ ಘಟಕದ ಸದಸ್ಯ ವಿಶ್ವಾಸ್ ಗೌಡ, ರಾಜ್ಯ ಸಾಮಾಜಿಕ‌ ಜಾಲತಾಣದ ಸದಸ್ಯ ಶಿವಾನಂದರೆಡ್ಡಿ, ಸೇರಿದಂತೆ ನಲವತ್ತಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು