ಮುಖ್ಯಮಂತ್ರಿ ಬೊಮ್ಮಾಯಿ ರವರಿಂದ ದೊಡ್ಡಬಳ್ಳಾಪುರ ದಲ್ಲಿ ರೋಡ್ ಶೋ…..
ಸಿ ಎಂ ಬೊಮ್ಮಾಯಿ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಪರ ಇಂದು ದೊಡ್ಡಬಳ್ಳಾಪುರ ನಗರದಲ್ಲಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು
ಕಿರಿ ವಯಸ್ಸಿನ ಸಾಧಕ ಧೀರಜ್ಗೆ ದೊಡ್ಡಬಳ್ಳಾಪುರ ದ ಜನ ದೊಡ್ಡ ಮನಸಿನಿಂದ ಆಶೀರ್ವದಿಸಿ ಗೆಲ್ಲಿಸಬೇಕೆಂದು ಮತ ದಾರರಲ್ಲಿ ಮನವಿ ಮಾಡಿದ ಬೊಮ್ಮಾಯಿ ದೊಡ್ಡಬಳ್ಳಾಪುರ ದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ದವಿದೆ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಸ್ಯಾಟಲೈಟ್ ಟೌನ್ ದೊಡ್ಡಬಳ್ಳಾಪುರ ದಲ್ಲಿ ನಿರ್ಮಿಸಲು ಯೋಜನೆಮಾಡಲಾಗಿದೆ ನೇಕಾರ ಸಮ್ಮಾನ್ ಯೋಜ್ಸ್ನೆಯಡಿ ಕೈಮಗ್ಗದ ನೇಕಾರರಾರಿಗಿದ್ದ ಯೋಜನೆಯನ್ನು ಪವರ್ಲುಮ್ ನೇಕಾರರಿಗೂ ವಿಸ್ತರಿಸಿದ್ದು ನಮ್ಮ ಸರ್ಕಾರ.1.10 ಲಕ್ಷ ನೇಕಾರರಿಗೆ ಹಣ ಸಹಾಯ ಮಾಡಿದ್ದೂ ನಮ್ಮ ಸರ್ಕಾರ. ಶೂನ್ಯ ಬಡ್ಡಿ ಸಾಲ 2 ಲಕ್ಷದಿಂದ 5 ಲಕ್ಷ ಕ್ಕೇ ರಿಸಿದ್ದು ತಳ ಸಮುದಾಯವನ್ನು ಸ್ವಾವಲಂಬಿಗಳಾಗಿ ಮಾಡಿದ್ದೂ ನಮ್ಮ ಸರ್ಕಾರದ ಸಾಧನೆ ಎಂದು ಬೊಮ್ಮಾಯಿ ಹೇಳಿದರು