- ದಶಕಗಳ ಹೋರಾಟದ ಪಲದಿಂದಾಗಿ,ಗ್ರಾಮಾಂತರ ಪತ್ರಕರ್ತರಿಗೆ ಬಸ್ ಪಾಸ್–ಜಿ ಸಿ ಲೋಕೇಶ್
ಹೊಸಕೋಟೆ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಶಕಗಳ ಹೋರಟದ ಪಲವಾಗಿ ಇಂದು ಗ್ರಾಮಾಂತರ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿಗಳು ಹಾಗು ಜಿಲ್ಲಾ ಉಸ್ತುವಾರಿಗಳಾದ ಜಿ.ಸಿ ಲೊಕೇಶ್ ಹೇಳಿದರು ಅವರು ಹೊಸಕೋಟೆಯ ಚೀಮಂಡಹಳ್ಳಿ ಬಳಿ ಇರುವ ಅಪ್ಪು ಫಾರಂ ಹೌಸ್ ನಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2022-2023 ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹಲವಾರು ವರ್ಷಗಳಿಂದ ರಾಜ್ಯ ಸಂಘವು ಸರ್ಕಾರ ಕ್ಕೆ ಬೇಡಿಕೆ ಇಟ್ಟಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ ಈ ಹಿಂದೆ ಇದ್ದ ರಾಜ್ಯಾದ್ಯಕ್ಷರು/ಪ್ರದಾನ ಕಾರ್ಯದರ್ಶಿ ಗಳು ಬಸ್ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಯೋಜನೆಗೆ ಈ ಹಿಂದಿದ್ದ ಸರ್ಕಾರ ಗಳಿಗೆ ಮನವಿ ಮಾಡಿ ಹೋರಾಟಗಳು ಮಾಡಿದ್ದಾರೆ,ಆದರೆ ಅದು ಸಾಕಾರಗೊಂಡಿರಲ್ಲಿಲ್ಲ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮಾದ್ಯಮ ಸಲಹೆಗಾರರಾದ ಕೆ .ವಿ ಪ್ರಭಾಕರ್ ರವರಿಗೆ ಕಳೆದ ವರ್ಷ ಬಸ್ ಪಾಸ್ ವಿಚಾರವಾಗಿ ರಾಜ್ಯ ಸಂಘವು ಕಳೆದ ವರ್ಷ ಮೇ ತಿಂಗಳಲ್ಲಿ ಮನವಿ ಮಾಡಿದಾಗ ಅವರು ಈ ಬಾರಿ ಬಜೆಟ್ ನಲ್ಲಿ ಸೇರಿಸಲು ಶ್ರಮವಹಿಸುವುದಾಗಿ ಭರವಸೆ ನೀಡಿದ್ದರು.ಅದರಂತೆ ಕೊಟ್ಟ ಮಾತಿನಂತೆ ಈ ಬಾರಿಯ ಬಜೆಟ್‌ನಲ್ಲಿ ಪತ್ರಕರ್ತರ ಬಸ್ ಪಾಸ್ ವಿಚಾರ ಬರಲು ಅನುವು ಮಾಡಿಕೊಟ್ಟ ಕೆ.ವಿ ಪ್ರಬಾಕರ್ ರವರಿಗೆ ರಾಜ್ಯ ಸಂಘದಲ್ಲಿ ಇತ್ತೀಚೆಗೆ ಗೌರವ ಸಮರ್ಪಣೆ ಮಾಡಲಾಯಿತೆಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕಾನೂನು ಬದ್ದವಾಗಿ ಹೈಕೋರ್ಟ್ ನಿರ್ದೆಶನದಂತೆ ಲೇಬರ್ ಆಕ್ಟ್ 1926 ರ ಪ್ರಕಾರ ಕ್ರಮ ಬದ್ದವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ಮುಖಾಂತರ ಪಾದಾದಿಕಾರಿಗಳು ಆಯ್ಕೆಯಾಗುತ್ತಿದ್ದು 92 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಬದ್ದರಾಗಿ ಸದಸ್ಯರಾಗಲು ಸದಸ್ಯರಿಗೆ ಮನವಿ ಮಾಡಿದರು.ಶಿವಾನಂದ ತಗಡೂರು ರವರ ನೇತೃತ್ವದಲ್ಲಿ ನಾನು ಕೂಡ ಹೆಗಲು ಕೊಟ್ಟು ಸಂಘದ ಅಭಿವೃದ್ಧಿ ಕೆಲಸ ಮಾಡುತ್ತಿದ್ದು ನನಗೆ ಈ ಸಂಘದಿಂದ ಸ್ಥಾನಮಾನವಿದೆ ,ನನ್ನಿಂದ ಸಂಘಕ್ಕಲ್ಲ ಅದೇ ರೀತಿಯ ಮನೋಭಾವ ಎಲ್ಲಾ ಸದಸ್ಯರು ಪಾಲಿಸಿಕೊಂಡು ಸಂಘವನ್ನು ಮುನ್ನೆಡೆಸಲು ಸಹಕರಿಸಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ ಮಾತನಾಡಿ ರಾಜ್ಯ ಸಂಘದ ಕಾರ್ಯ ವೈಖರಿಯನ್ನು ಶ್ಲಾಘಿಸುತ್ತಾ ದಾವಣಗೆರೆಯ 38ನೆರ ರಾಜ್ಯ ಸಮ್ಮೇಳನದ ಯಶಸ್ಸಿಗೆ ಜಿ.ಸಿ ಲೋಕೇಶ್ ರವರ ಶ್ರಮ ಸ್ಮರಣೀಯ ಎಂದರು.ಚುನಾವಣಾ ಪೂರ್ವದಲ್ಲಿ ಸದಸ್ಯರಿಗೆ ನೀಡಿದ ಭರವಸೆಯಂತೆ ಉಚಿತ ಸದಸ್ಯತ್ವ,ಸಮ್ಮೇಳನಕ್ಕೆ ಆಗಮಿಸುವ ಸದಸ್ಯರಿಗೆ ಪ್ರಯಾಣ ಭತ್ಯೆ ನೀಡುತ್ತಿದ್ದು ಇನ್ಸೂರೆನ್ಸ್ ನ್ನು ಈ ವರ್ಷಾಂತ್ಯದಲ್ಲಿ ಮಾಡಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯೆ ಸಿ .ಪಿ ಕುಸುಮಾ,ಜಿಲಾದ್ಯಕ್ಷ ಜಿ.ಶ್ರೀನಿವಾಸ,ಉಪಾಧ್ಯಕ್ಷ ಮುರುಳಿ ಮೋಹನ್, ಎಂ ಜ್ಯೋತೀಶ್ವರಪ್ಪ,ಪ್ರಧಾನ ಕಾರ್ಯದರ್ಶಿ ಆರ್ ರಮೇಶ್,ಖಜಾಂಚಿ ಶಾಂತಮೂರ್ತಿ,ಕಾರ್ಯದರ್ಶಿ ಬಿ.ಸಿ ಪರಮಶಿವಯ್ಯ,ಎಂ ಆರ್ ನಾಗರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಂ ದೇವರಾಜು,ಜಿ.ಕೆ ಸುಗ್ಗರಾಜು,ಡಿ.ಎಂ ಮಂಜುನಾಥ,ಆರ್ ಸತೀಶ್, ಎಸ್ ಮಹೇಶ್, ಎ.ಮಧು,ಡ.ಎನ್ ಸುರೇಶ್, ವೈ ಆನಂದ್,ಚನ್ನಕೃಷ್ಣಪ್ಪ,ಸ್ವರೂಪ್,ಎಸ್ ಬಿ ರಫಿಯುಲ್ಲಾ,ಪಿಳ್ಳರಾಜು,ಬಿ ರಮೇಶ್,ರಾಜಗೋಪಾಲ್ ಮತ್ತು ನಾಲ್ಕು ತಾಲ್ಲೋಕಿನ ಅದ್ಯಕ್ಷರು ಪ್ರದಾನ ಕಾರ್ಯದರ್ಶಿಗಳು ಜಿಲ್ಲೆಯ ಎಲ್ಲಾ ಸದಸ್ಯರು ಬಾಗವಹಿಸಿದ್ದರು.