ರಾಜಘಟ್ಟ ಕೆರೆ ಏರಿಯಿಂದ ಉರುಳಿ ಬಿದ್ದ ಕಾರು, ಪ್ರಯಾಣಿಕರು ಪ್ರಾಣಪಾಯದಿಂದ ಪಾರು.

ದೊಡ್ಡಬಳ್ಳಾಪುರ : ರಾಜಘಟ್ಟ ಕೆರೆ ಏರಿಯಿಂದ ಕಾರು ಉರುಳಿ ಬಿದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಅವೈಜ್ಞಾನಿಕವಾಗಿದ್ದ ರಸ್ತೆಯನ್ನ ಸುಗಮ ರಸ್ತೆಯನ್ನಾಗಿ ಮಾಡುವ ಕಾಮಾಗಾರಿಗೆ ಗುದ್ದಲಿ ಪೂಜೆ ಮಾಡಿ ವರ್ಷವಾದರು, ಗುತ್ತಿಗೆದಾರ ಕಾಮಾಗಾರಿ ಪ್ರಾರಂಭಿಸಿಲ್ಲ, ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದ ಎರಡು ತಿಂಗಳಲ್ಲಿ ನಾಲ್ಕನೇ ಕಾರು ಕೆರೆ ಏರಿಯಿಂದ ಉರುಳಿ ಬಿದ್ದಿದೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಕೆರೆ ಏರಿ ಮೇಲೆ ಇಂದು ಮುಂಜಾನೆ ಘಟನೆ ನಡೆದಿದ್ದು, ಕಡಿದಾದ ತಿರುವಿನಿಂದ ನಿಯಂತ್ರಣ ತಪ್ಪಿದ ಕಾರು ಕೆರೆ ಏರಿಯಿಂದ ಕೆಳಗೆ ಬಿದ್ದಿದೆ, ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದ ಕಾರು ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದ ದೊಡ್ಡಬಳ್ಳಾಪುರ ಮೂಲದ ಮೂವರು ಪ್ರಯಾಣಿಕರು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ.

ರಾಜಘಟ್ಟ ಕೆರೆ ಏರಿ ಮೇಲಿನ ತಿರುವುಗಳು ಕಡಿದಾಗಿದ್ದು, ಕಡಿದಾದ ತಿರುವುಗಳು ನೇರ ಮಾಡುವ ಕಾಮಾಗಾರಿಗೆ ವರ್ಷದ ಹಿಂದೆಯೇ ಶಂಕುಸ್ಫಾಪನೆ ಮಾಡಲಾಗಿತ್ತು, ಆದರೆ ಲೋಕಪಯೋಗಿ ಇಲಾಖೆ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕಾಮಾಗಾರಿ ಇನ್ನೂ ಆರಂಭವಾಗಿಲ್ಲ, ಎರಡು ತಿಂಗಳಲ್ಲಿ ನಾಲ್ಕು ಕಾರುಗಳು ಕೆರೆ ಏರಿಯಿಂದ ಉರುಳಿ ಕೆಳಗೆ ಬಿದ್ದಿವೆ, ವಾಹನ ಸವಾರರ ಪ್ರಾಣದೊಂದಿದೆ ಚೆಲ್ಲಾಟವಾಡುವುದನ್ನ ಬಿಟ್ಟು ಶೀಘ್ರವೇ ರಸ್ತೆ ಕಾಮಾಗಾರಿ ಆರಂಭಿಸುವಂತೆ ಗಣೇಶ್ ರಾಜಘಟ್ಟರವರು ಒತ್ತಾಯಿಸಿದರು.