ದೊಡ್ಡಬಳ್ಳಾಪುರ : ತಾಲೂಕಿನ ಹುಲಿಕುಂಟೆ ಹಾಲು ಉತ್ಪಾದಕರ ಸಂಘಕ್ಕೆ ಇಂದು ನಡೆದ ಚುನಾವಣೆಯ ಪಲಿತಾಂಶ ಪ್ರಕಟವಾಗಿದ್ದು, ಹನ್ನೊಂದು ಸ್ಥಾನಗಳಲ್ಲಿ 10 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣ ಅಧಿಕಾರಿಗಳಾಗಿದ್ದ ಮಾಧವರೆಡ್ಡಿ ಅವರು ಪಲಿತಾಂಶ ಪ್ರಕಟಿಸಿದ್ದು ಸಾಮಾನ್ಯ ಕ್ಷೇತ್ರದಿಂದ ಪುಟ್ಟರಾಜು, ಹೆಚ್‌.ಎಸ್.ಶಿವಕುಮಾರ್, ರವಿಕುಮಾರ್, ಸಿದ್ದಲಿಂಗಸ್ವಾಮಿ ಹೆಚ್‌.ಆರ್, ಪುಟ್ಟಯ್ಯ.ಹೆಚ್, ಹನುಮಂತರಾಯಪ್ಪ ಸಾಮಾನ್ಯ ಕ್ಷೇತ್ರದಿಂದ ಚುನಾಯಿತರಾದರೆ, ಗಿರಿಜಮ್ಮ ಮತ್ತು ಮಂಜುಳಾ ಅವರು ಮಹಿಳಾ ಮೀಸಲು ಕ್ಷೇತ್ರದಿಂದ ಹಾಗೂ ಪುಟ್ಟಾಂಜಿನಪ್ಪ, ಹಿಂದುಳಿದ ಪ್ರವರ್ಗ -ಎ ಮತ್ತು ಗೋವಿಂದರಾಜು ಹೆಚ್.ಕೆ ಹಿಂದುಳಿದ ಪ್ರವರ್ಗ -ಬಿ ತಿಮ್ಮಕ್ಕ (ಪರಿಶಿಷ್ಟ ಪಂಗಡ) ಇವರುಗಳು ಚುನಾಯಿತರಾಗಿದ್ದಾರೆ ಎಂದು ಘೋಷಿಸಿದ್ದಾರೆ.

ಚುನಾವಣೆಯಲ್ಲಿ ಜಯಗಳಿಸಿದವರನ್ನು ಮಾಜಿ ಶಾಸಕರಾದ ಟಿ.ವೆಂಕಟರಮಣಯ್ಯ, ಕಾಂಗ್ರೆಸ್ ಮುಖಂಡರಾದ ಟಿ.ರಾಮಣ್ಣ, ಸೃಷ್ಟಿ ದೇವರಾಜು, ಶ್ರೀನಿವಾಸ್, ಕಮ್ಮಸಂದ್ರ ರಾಜಣ್ಣ, ಕುಮಾರ್, ಗೋವಿಂದರಾಜು, ಪ್ರಕಾಶ್, ಸೋಮಣ್ಣ ಸೇರಿದಂತೆ ಊರಿನ ಮುಖಂಡರು ಅಭಿನಂದಿಸಿದ್ದಾರೆ.