ರಾಜಘಟ್ಟದ ಬೌದ್ಧ ವಿಹಾರ ಕೇಂದ್ರ ಪಾರಂಪರಿಕ ತಾಣವಾಗಿ ಅಭಿವೃದ್ಧಿ, ರಾಜಘಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೌದ್ಧ ಬಿಕ್ಕುಗಳ ತಂಡ
ದೊಡ್ಡ ಬಳ್ಳಾಪುರ:ರಾಜಘಟ್ಟ ,2 ಸಾವಿರ ವರ್ಷಗಳ ಹಿಂದೆ ದಕ್ಷಿಣ ಭಾರತದ ಪ್ರಮುಖ ಬೌದ್ಧರ ನೆಲೆಯಾಗಿದ್ದ ರಾಜಘಟ್ಟ ಇವತ್ತು ಮಣ್ಣಲ್ಲಿ ಹುದುಗಿ ಹೋಗಿದೆ, ರಾಜಘಟ್ಟದ ಬೌದ್ಧ ವಿಹಾರ ಹಾಗೂ ಚೈತ್ಯವನ್ನ ಪಾರಂಪರಿಕ ತಾಣವಾಗಿ ಅಭಿವೃದ್ಧಿ ಮಾಡುವ ಸಲುವಾಗಿ ಮಹಾಬೋಧಿ ಸಂಶೋಧನ ಕೇಂದ್ರದ ಬಿಕ್ಕುಗಳ ರಾಜಘಟ್ಟದ ಬೌದ್ಧರ ನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಭಾರತದ ಪ್ರಸಿದ್ಧ ಬೌದ್ಧರ ನೆಲೆಯಾಗಿತ್ತು, 2001 ಮತ್ತು 2004 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಪ್ರೋ.ಎಂ.ಎಸ್.ಕೃಷ್ಣಮೂರ್ತಿ ಉತ್ಖನನ ಮಾಡಿದ್ದು, ಈ ವೇಳೆ ಬೌದ್ಧ ವಿಹಾರ ಚೈತ್ಯ ಮತ್ತು ವ್ಯವಸ್ಥಿತವಾತ ನಗರ ಇತ್ತೆಂದು ದಾಖಲಾಗಿದೆ, ಆದರೆ ಈ ತಾಣವನ್ನ ಪಾರಂಪರಿಕ ತಾಣವೆಂದು ಘೋಷಣೆ ಮಾಡ ಹಿನ್ನಲೆ ಉತ್ಖನನ ಮಾಡಿದ ಸ್ಥಳವನ್ನ ಮಣ್ಣನಿಂದ ಮುಚ್ಚಿದರಿಂದ ರಾಜಘಟ್ಟ ಬೌದ್ಧರ ನೆಲೆ ಇತಿಹಾಸದ ಮೂಲೆಗೆ ಸೇರಿದು, ಇದೀಗ ರಾಜಘಟ್ಟದ ಬೌದ್ಧರ ನೆಲೆಯನ್ನ ಪಾರಂಪರಿಕ ತಾಣವಾಗಿ ಅಭಿವೃದ್ಧಿ ಮಾಡಲು ಮಹಾಬೋಧಿ ಸಂಶೋಧನ ಕೇಂದ್ರ ಮುಂದಾಗಿದೆ.
ನಿರ್ದೇಶಕರಾದ ಭಿಕ್ಕು ಬುದ್ದತ್ತ ನೇತೃತ್ವದ ಬಿಕ್ಕುಗಳ ತಂಡ ರಾಜಘಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಮಹಾಭೋದಿ ಸಂಶೋಧನ ನಿರ್ದೇಶಕರಾದ ಬಿಕ್ಕು ಬುದ್ಧತ್ತ, ನಮ್ಮ ಗುರುಗಳು ನಂದಿಬೆಟ್ಟಕ್ಕೆ ಬಂದು ತಪ್ಪಸ್ಸು ಮಾಡುತ್ತಿದ್ದರು, ಈ ವೇಳೆ ನಂದಿಬೆಟ್ಟದ ಸನಿಹವೇ ಇರುವ ರಾಜಘಟ್ಟದಲ್ಲಿ ಬೌದ್ಧರ ವಿಹಾರ ಇರುವ ಬಗ್ಗೆ ಹೇಳಿದ್ದರು, ಮೈಸೂರು ವಿಶ್ಯವಿದ್ಯಾಲಯ ನಡೆಸಿದ ಉತ್ಖನನದ ನಂತರ ಬೌದ್ಧ ವಿಹಾರ ಪಳೆಯುಳಿಕೆ ಪತ್ತೆಯಾಗಿದೆ, ಬೆಂಗಳೂರಿನ ಸನಿಹವೇ ಇರುವ ಈ ನೆಲೆಯನ್ನ ಪಾರಂಪಾರಿಕ ತಾಣವಾಗಿ ಅಭಿವೃದ್ಧಿ ಪಡಿಸ ಬೇಕಿದೆ, ಸುತ್ತಲು ಹಸಿರು, ಬೆಟ್ಟಗಳ ಸಾಲು, ಶಾಂತಿ ಪ್ರಿಯ ಜನರ ನಡುವೆ ಧ್ಯಾನ ಕೇಂದ್ರ ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಗೆ ಬೌದ್ಧರ ನೆಲೆಯ ಬಗ್ಗೆ ತಿಳಿಸ ಬೇಕಿದೆ ಎಂದರು.
ಈ ವೇಳೆ ರಮೇಶ್ ಸಂಕ್ರಾತಿ, ನರಸಿಂಹಮೂರ್ತಿ, ಮಾಳವ ನಾರಾಯಣ್ , ರಾಜೇಂದ್ರ ಹಾಗೂ ರಾಜ್ ಗೋಪಾಲ್ ರವರು ಇದ್ದರು