ಮಣ್ಣಿನ ಕಳ್ಳರ ಹಣ ದಾಹಕ್ಕೆ ಬಲಿಯಾಗುತ್ತಿರುವ ತಳಗವಾರ ಕೆರೆ.

ದೊಡ್ಡಬಳ್ಳಾಪುರ: ತಾಲೂಕಿನ ತಳಗವಾರ ಕೆರೆ 200ಕ್ಕೂ ಹೆಚ್ಚು ಎಕರೆಯಷ್ಟು ವಿಸ್ತೀರ್ಣದ ದೊಡ್ಡ ಕೆರೆ, ತಳಗವಾರ,ಕುರುಬರಹಳ್ಳಿ, ಕೊಡಿಗೇನಹಳ್ಳಿ, ಹೊಸಹಳ್ಳಿ, ಮಾದಗೊಂಡನಹಳ್ಳಿಯನ್ನ ಸುತ್ತುವರೆದಿರುವ ಸುಂದರವಾದ ಕೆರೆ, ಬೇಸಿಗೆ ಆರಂಭದೊಂದಿಗೆ ಕೆರೆಯಲ್ಲಿ ನೀರು ಖಾಲಿಯಾಗುತ್ತಲೇ ಕೆರೆಯ ಒಡಲು ಬಗೆಯಲು ಕಳ್ಳರು ಮುಂದಾಗಿದ್ದಾರೆ, ಕತ್ತಲಾಗುತ್ತಲೇ ಕೆರೆಗೆ ದಾಳಿ ಮಾಡುವ ಕಳ್ಳರು ಜೆಸಿಬಿಗಳ ಮೂಲಕ ಕೆರೆ ಮಣ್ಣನ್ನು ಅಗೆದು ಲಾರಿಗಳ ಮೂಲಕ ಬೇರೆಡೆ ಸಾಗಿಸುತ್ತಿದ್ದಾರೆ, ಪ್ರತಿ ದಿನ ನೂರಕ್ಕೂ ಹೆಚ್ಚು ಲೋಡ್ ಗಳಷ್ಟು ಮಣ್ಣು ಖಾಸಗಿಯವರಿಗೆ ಮಾರಾಟವಾಗುತ್ತಿದೆ, ತಳಗವಾರ ಕೆರೆ ಸಂರಕ್ಷಣೆಗೆ ಮುಂದಾಗಿರುವ ತಳಗವಾರ ಪುನೀತ್ ಅಕ್ರಮ ಮಣ್ಣು ಸಾಗಣೆಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.

ಕೆರೆಯ ಮಣ್ಣು ತೆಗೆಯಲು ಸಣ್ಣ ನೀರಾವರಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಹಶೀಲ್ದಾರ್ ಕಛೇರಿ ಮತ್ತು ಗ್ರಾಮ ಪಂಚಾಯಿತಿಯಿಂದ ಅನುಮತಿಯನ್ನ ಪಡೆದಿರ ಬೇಕು, ಆದರೆ ಮಣ್ಣಿನ ಕಳ್ಳರು ಯಾವ ಇಲಾಖೆಯಿಂದಲೂ ಅನುಮತಿ ಪಡೆಯದೆ ಅಕ್ರಮವಾಗಿ ಕೆರೆ ಮಣ್ಣನ್ನು ತೆಗೆಯುತ್ತಿದ್ದಾರೆ, ಗ್ರಾಮದ ಯುವಕರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ, ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಪ್ರತಿ ಲೋಡ್ ಮಣ್ಣು 6 ಸಾವಿರಕ್ಕೆ ಮಾರಾಟವಾಗುತ್ತಿದೆ, ಗ್ರಾಮದ ಸಂಪತ್ತು ಕಂಡೋರ ಪಾಲಾಗುತ್ತಿದೆ, ಜೊತೆಗೆ ಕೆರೆಯಲ್ಲಿ ಅಂಗಳದಲ್ಲಿರುವ ಕೊಟ್ಯಾಂತರ ರೂಪಾಯಿ ಮೌಲ್ಯದ ಸಾವಿರಾರು ಜಾಲಿ ಮರಗಳು ಸಹ ಕಳ್ಳರ ಪಾಲುಗುತ್ತಿದೆ ಎಂದು ಗ್ರಾಮಸ್ಥರಾದ ದಯಾನಂದ್ ಅಕ್ರೋಶ ವ್ಯಕ್ತಪಡಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾನದಂಡ ಪ್ರಕಾರ ಮೂರು ಅಡಿ ಅಳದಷ್ಟು ಮಾತ್ರ ಮಣ್ಣು ತೆಗೆಯ ಬೇಕು, ಆದರೆ ಮಣ್ಣಿನ ಕಳ್ಳರು 10 ಆಡಿಗಳ ಅಳವಾದ ಗುಂಡಿಗಳನ್ನ ತೋಡಿ ಮಣ್ಣು ತೆಗೆಯುತ್ತಿದ್ದಾರೆ, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಗುಂಡಿಗಳು ಈಜಲು ಬರುವ ಯುವಕರ ಬಲಿ ತೆಗೆದು ಕೊಳ್ಳುತ್ತಿದೆ, ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.