ದೊಡ್ಡಬಳ್ಳಾಪುರ : ಸಕ್ಕರೆಗೊಲ್ಲಹಳ್ಳಿ ಎಂ.ಪಿ.ಸಿ.ಎಸ್ ಗೆ ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಹರೀಶ್ ಆಯ್ಕೆಯಾಗಿದ್ದಾರೆ.
ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಎಂ.ಪಿ.ಸಿ.ಎಸ್ ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬೆಂಬಲಿತ 12 ಅಭ್ಯರ್ಥಿಗಳು ಜಯಶಾಲಿಗಳಾಗಿದ್ದು, ಬಿಜೆಪಿ ಕೇವಲ 1 ಸ್ಥಾನದಲ್ಲಿ ಮಾತ್ರ ಜಯಿಸಲು ಸಾಧ್ಯವಾಗಿದೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧಕ್ಷರನ್ನು ಗಣ್ಯರು, ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಹೂವಿನಾರ ಹಾಕಿ ಸಿಹಿ ತಿನಿಸುವ ಮೂಲಕ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರಾಜಣ್ಣ, ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಏಳಿಗೆಗೆ ಅವಿರತವಾಗಿ ಶ್ರಮಿಸುತ್ತೇನೆ. ಹಾಲು ಉತ್ಪಾದಕರನ್ನು ಉತ್ತೇಜಿಸಿ ಗುಣ್ಣಮಟ್ಟದ ಹಾಲನ್ನು ಡೇರಿಗೆ ನೀಡುವಂತೆ ಪ್ರೋತ್ಸಾಹಿಸಲಾಗುವುದು, ಅದೇ ರೀತಿ ಹಸುಗಳಿಗೆ ಬೇಕಾಗುವ ಔಷಧಿಗಳು, ಆರೋಗ್ಯ ತಪಾಸಣೆ, ಗುಣಮಟ್ಟದ ಹಸುಗಳ ಆಹಾರ ಸಾಮಗ್ರಿಗಳನ್ನು ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದರು.