- ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಶ್ರೀ ವೆಂಕಟೇಶ್ವರ ಎಜುಕೇಷನ್ ಫೌಂಡೇಶನ್ ವತಿಯಿಂದ ಬೆಳ್ಳಿ ರಥ ಕಾಣಿಕೆ
ದೊಡ್ಡಬಳ್ಳಾಪುರ: ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಯಲಹಂಕದ ಶ್ರೀ ವೆಂಕಟೇಶ್ವರ ಎಜುಕೇಶನ್ ಫೌಂಡೇಷನ್ ವತಿಯಿಂದ ಬೆಳ್ಳಿ ರಥವನ್ನು ಕಾಣಿಕೆಯನ್ನಾಗಿ ಸಮರ್ಪಿಸಲಾಯಿತು.
ಯಲಹಂಕದ ವಿದ್ಯಾನಗರ ನಿವಾಸಿಗಳಾದ ನವ್ಯ ಹಾಗೂ ಶಶಿಧರ್ ಮುನಿಯಪ್ಪ ಅವರು ಸುಮಾರು 58 ಕೆ.ಜಿ ತೂಕದ ಬೆಳ್ಳಿ ರಥವನ್ನು ದೇಗುಲಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ, ಡಿ ನಾಗರಾಜ್, ದೇವಾಲಯದ ಅರ್ಚಕ ವೃಂದ ಹಾಗೂ ದೇವಾಲಯದ ಸಿಬ್ಬಂದಿ ಹಾಜರಿದ್ದರು.