ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸಂವಿಧಾನ ಜಾಗೃತಿ ಜಾಥಾ ಅದ್ದೂರಿಯಾಗಿ ನಡೆಯಿತು.

ಯರಗನಗದ್ದೆಯಿಂದ ವಿಜಿಕೆಕೆ ಶಾಲೆಯವರಗೆ ಜಾಥಾ ನಡೆಸಲಾಯಿತು.

ಜಾಗೃತಿ ಜಾಥಾಕ್ಕೆ ಬಿಳಿಗಿರಿರಂಗನ ಬೆಟ್ಟದ ಉಪಾಧ್ಯಕ್ಷೆ ಕಮಲಮ್ಮ ಪುಪ್ಪನಮನ ಸಲ್ಲಿಸಿ ಚಾಲನೆ ನೀಡಿದರು.

ಜಾಥಾದಲ್ಲಿ ಕೊರುಕ‌ನ ನೃತ್ಯ, ಡೊಳ್ಳು, ನಗರಿ ಸದ್ದು ಜೋರಾಗಿತ್ತು.

ರಾಷ್ಟ್ರನಾಯಕರ ವೇಷಭೂಷಣ ಮಕ್ಕಳು ಧರಿಸಿದರು.

ಮುಖ್ಯಭಾಷಣಕಾರರಾಗಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾದ ನಂಜುಂಡಸ್ವಾಮಿ ಮಾತನಾಡಿ.ನಮ್ಮ ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು
ಡಾಕ್ಟರ್ ಬಿ‌ ಆರ್ ಅಂಬೇಡ್ಕರ್ ರವರು ಅನೇಕ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ಸಮಾನತೆ ಸಹೋದರತೆ ಸಹಬಾಳ್ವೆ ಎಲ್ಲಾವನ್ನು ಒಳಗೊಂಡ ಒಂದು ಬೃಹತ್ ಲಿಖಿತ ಸಂವಿಧಾನವನ್ನು ರಚಿಸಿ ಕೊಟ್ಟಿದ್ದಾರೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಧಿಕಾರಿ ರಾಜೇಶ್, ಮಾಜಿ ಜಿಪಂ ಸದಸ್ಯ ಕೇತಮ್ಮ,ಗ್ರಾಪಂ ಸದಸ್ಯ ಮಾದಮ್ಮ, ಸಾಕಮ್ಮ, ರಂಗಮ್ಮ, ಸಿಡಿ ಮಹದೇವ, ಮುಖಂಡ ವೆಂಕಟೇಶ್ ಮೊರಾರ್ಜಿ ದೇಸಾಯಿ ಶಾಲೆ ಮತ್ತು ವಿಜಿಕೆಕೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ