ಕೆಸ್ತೂರಿನಲ್ಲಿ‌ ಎಲ್ಲಾ ಸಮುದಾಯವರಿಂದ ಸಂವಿಧಾನ ಜಾಗೃತಿ ಕಾರ್ಯಕ್ರಮ ಯಶಸ್ವಿ.

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಸೇರಿ ಸಂವಿಧಾನ ಜಾಗೃತಿ ರಥಯಾತ್ರೆಯನ್ನು ಬರಮಾಡಿಕೊಂಡರು.

ರಾಜ್ಯಸರಕಾರ 75ನೇ ಗಣರಾಜ್ಯೋತ್ಸವದ ಹಿನ್ನಲೆ ನಾಡಿನ ಜನರಿಗೆ ಸಂವಿಧಾನ ಅರಿವು ಮೂಡಿಸಿಲು ರಾಜ್ಯಾದ್ಯಂತ ಟ್ಯಾಬ್ಲೋಗಳ ಮೂಲಕ ಪ್ರತಿ ಗ್ರಾಮಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ರಥಯಾತ್ರೆ ತೆರಳಿ ಜಾಗೃತಿ ಮೂಡಿಸುವಂತಹ ಕಾರ್ಯಕ್ಕೆ ಮುಂದಾಗಿದೆ.

ಸಂವಿಧಾನ ಜಾಗೃತಿ ರಥಯಾತ್ರೆಗೆ ಗ್ರಾಮಪಂಚಾಯತಿ ಅಧ್ಯಕ್ಷೆ ಕೋಮಲರವರು ಹಾಗೂ ನಾಡಗೌಡರು, ಗೌಡರು, ಎಲ್ಲಾ ಕೋಮಿನ ಯಜಮಾ‌ನರು ಪುಪ್ಪನಮನ ಸಲ್ಲಿಸಿದರು
ಗ್ರಾಮದ ಮುಖ್ಯರಸ್ತೆಯಲ್ಲಿ ಟ್ಯಾಬ್ಲೋ ತೆರಳಿತು.

ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಕಳಸ ಹೊತ್ತು ದಾರಿಯುದ್ದಕ್ಕೂ ಸಾಗಿದರು. ಯುವಕರು ಅಂಬೇಡ್ಕರ್ ಘೋಷಣೆ ಕೂಗಿ ಸಂಭ್ರಮಿಸಿದರು.

ರಥಯಾತ್ರೆಯಲ್ಲಿ ವಿದ್ಯಾರ್ಥಿಗಳು, ಯುವಕರು, ಮುಖಂಡರು ಮಾರಿಕುಣಿತ ಕುಣಿದು ಕುಪ್ಪಳಿಸಿದರು.

ಡೊಳ್ಳು, ಮಂಗಳ ವಾದ್ಯ, ಹುಲಿವೇಷ, ನಗಾರಿ ಸದ್ದಿನೊಂದಿಗೆ ಜಾಗೃತಿಯಾತ್ರೆ ನಡೆಯಿತು.

ರಸ್ತೆಯ ಉದ್ದಕ್ಕೂ ಪಟಾಕಿ ಸದ್ದು ಜೋರಾಗಿತ್ತು ಅಲ್ಲಲ್ಲಿ ನೀರು ಮಜ್ಜಿಗೆ ಪಾನಕ ವಿತರಣೆ ನಡೆಯಿತು.

ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಸೇರಿ ಸಂವಿಧಾನ ಜಾಗೃತಿ ರಥ ಯಾತ್ರೆಯನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡ ಯಶಸ್ವಿಗೊಳಿಸಿದರು.

ವೇದಿಕೆ ಕಾರ್ಯಕ್ರಮವನ್ನು ಮಾರಮ್ಮನ ದೇವಾಲಯದ ಮುಂಭಾಗ ಅದ್ದೂರಿಯಾಗಿ ನಡೆಯಿತು.
ಮುಖ್ಯ ಭಾಷಣಕಾರದ ಪ್ರಾಂಶುಪಾಲ ಶಾಂತರಾಜು ಮಾತನಾಡಿ. ಸಂವಿಧಾನದ ಅರಿವು ಪ್ರತಿಯೊಬ್ಬ ಪ್ರಜೆಗೂ ಅವಶ್ಯಕವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸರ್ವ ಧರ್ಮಗಳು ಸರ್ವ ಜನಾಂಗದವರು ಒಪ್ಪುವಂತಹ ಸಂವಿಧಾನವನ್ನು ನೀಡಿದ್ದಾರೆ. ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಮಾನತೆ, ಭ್ರಾತೃತ್ವ, ಸಮಾಜವಾದ, ಗಣರಾಜ್ಯ ತತ್ವವನ್ನು ನಮ್ಮ ಸಂವಿಧಾನ ಅಳವಡಿಸಿಕೊಂಡಿದೆ. ರಾಜ್ಯ ಸರಕಾರ ಇಂತಹ ಜಾಗೃತಿ ಕಾರ್ಯ ಕ್ರಮವನ್ನು ಆಯೋಜಿರುವುದಕ್ಕೆ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶೋಭಾ, ತಾಲ್ಲೂಕು ಸಮಾಜ ಕಲ್ಯಾಣಧಿಕಾರಿ ರಾಜೇಶ್, ಸದಸ್ಯರಾದ ಗುರುಲಿಂಗಯ್ಯ, ಪ್ರಸಾದ್, ಮಹದೇವಸ್ವಾಮಿ, ಮಹೇಶ್‌ಪ್ಪ, ರಾಜು, ಮಹೇಂದ್ರ, ಕುಮಾರ್ ಎನ್ , ಸುನೀತಾ. ಮುಖಂಡರಾದ ಸಿದ್ದರಾಜು, ಬಿ ನಾಗರಾಜು, ಮಧು, ಡಿ ಎನ್ ನಟರಾಜು, ಮುಖ್ಯೋಪಾಧ್ಯಾಯರಾದ ಉಮಾಶಂಕರ್, ನಟರಾಜು, ಸಿದ್ದರಾಜು, ಮಹಿಳಾ ಸಂಘದವರು, ಆಶಾ ಕಾರ್ಯಕರ್ತಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಹಾಗೂ ಕೆಸ್ತೂರು ಗ್ರಾಮಸ್ಥರು ಹಾಜರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ