ಹುಲುಕಡಿ ಬೆಟ್ಟದ ವೀರಭದ್ರಸ್ವಾಮಿಯ 43ನೇ ವರ್ಷದ ವೈಭವದ ರಥೋತ್ಸವ ಸಂಪನ್ನ.ದೊಡ್ಡಬಳ್ಳಾಪುರ ತಾಲ್ಲೂಕು,ದೊಡ್ಡಬೆಳವಂಗಲ ಹೋಬಳಿ ಹಣಬೆ ಗ್ರಾಮದ ಹುಲುಕಡಿ ಬೆಟ್ಟದ ವೀರಭದ್ರ ಸ್ವಾಮಿ ಪ್ರಸನ್ನ ಭದ್ರಕಾಳಮ್ಮದೇವಿಯ 43ನೇ ವರ್ಷದ ರಥೋತ್ಸವ ಶುಕ್ರವಾರ ಬಹಳಷ್ಟು ವಿಜೃಂಭಣೆಯಿಂದ ನೆಡೆಯಿತು.
ರಥೋತ್ಸವಕ್ಕೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.
ದೇವಾಲಯದಲ್ಲಿ ಮುಂಜಾನೆಯಿಂದ ಹೋಮ ಹಾಗು ವಿಶೇಷ ಪೂಜೆ ಕೈಂಕರ್ಯಗಳು ನಡೆದವು ರಥೋತ್ಸವದ ಅಂಗವಾಗಿ ಗುರುವಾರ ಸಂಜೆ ಉಯ್ಯಾಲೋತ್ಸವ ಅಗ್ನಿ ಕೊಂಡ ಅಗ್ನಿ ಪೂಜೆ ಹಾಗು ದೀಪಾರಾಧನೆ ನೆಡೆದವು.
ಮಧ್ಯಾಹ್ನ ರಥೋತ್ಸವದ ಸಂದರ್ಭದಲ್ಲಿ ಭಾಗವಹಿಸಿದ ವೀರಗಾಸೆ ಕಂಸಾಳೆ ಕುಣಿತ ಹಾಗು ಡೊಳ್ಳು ಕುಣಿತಗಳು ಬಂದ ಭಕ್ತರಿಗೆ ಮನರಂಜನೆಯ ಮೆರಗು ನೀಡಿದವು.
ಸಾವಿರಾರು ಭಕ್ತರು ಬೆಟ್ಟದ ವೀರಭದ್ರ ಸ್ವಾಮಿಯ ಮೆಟ್ಟಲು ಹತ್ತಿ ಹೋಗಿ ದರ್ಶನ ಪಡೆದರು.
ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ವಹಿಸಿ ಆಶೀರ್ವಚನ ನೀಡಿ ದಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕಾಗಿದೆ ದಾರ್ಮಿಕ ಬಾವನೆಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ದೇವರು ಧರ್ಮದ ಬಗ್ಗೆ ಈಗಿನ ಯುವ ಪೀಳಿಗೆ ಶ್ರದ್ದೆ ಹೊಂದಬೇಕು ಜಾತ್ರಾ ಉತ್ಸವಗಳಲ್ಲಿ ಎಲ್ಲಾ ಜಾತಿ ಜನಾಂಗ ಒಂದು ಕಡೆ ಸೇರಲು ಅವಕಾಶ ಕಲ್ಪಿಸಿ ಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ದೀರಜ್ ಮುನಿರಾಜ್ ಮಾಜಿ ಶಾಸಕ ವೆಂಕಟರಮಣಯ್ಯ ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಹಾಗು ವಿವಿದ ಕಡೆ ಬಂದ ಭಕ್ತರಿಗೆ ರಾಮಣ್ಣ ಅನ್ನ ಸಂತರ್ಪಣೆ ನಡೆಸಿದರು.