ಎಸ್. ನಾಗೇನಹಳ್ಳಿಯಲ್ಲಿ ಸವಿತಾ ಮಹರ್ಷಿ ಜಯಂತಿ ಉತ್ಸವ

ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿ ಎಸ್ ನಾಗೇನಹಳ್ಳಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಸವಿತಾ ಸಮಾಜ ವತಿಯಿಂದ ಶುಕ್ರವಾರ ಸಂಜೆ ಸವಿತಾ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸತ್ಯನಾರಾಯಣ ಮಾತಾನಾಡಿ, ನಮ್ಮ ಸಮಾಜದ ಶ್ರೇಷ್ಟತೆಗೆ ಶ್ರಮಿಸಿದ ಮಹಾನ್ ವ್ಯಕ್ತಿ ಸವಿತಾ ಮಹರ್ಷಿಗಳು. ಇವರು ರಥಸಪ್ತಮಿಯ ದಿನ ಶಿವನ ಬಲಗಣ್ಣಿನಿಂದ ಜನ್ಮತಾಳಿದ್ದರೆಂದು ಪುರಾಣದಲ್ಲಿದೆ. ಸವಿತಾ ಮಹರ್ಷಿ ಸಮಾಜಮುಖಿಯಾಗಿ ಬೆಳೆದು ನಮ್ಮ ಕುಲದ ದಾರಿದೀಪವಾಗಿದ್ದಾರೆ ಎಂದರು.

ಸವಿತಾ ಸಮಾಜದ ಯುವ ಮುಖಂಡ ನಾಗರಾಜು ಮಾತಾನಾಡಿ ಮಹಾತ್ಮರ ಜಯಂತಿಗಳನ್ನು ,ಆಚರಿಸುವ ಮೂಲಕ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ನಮಗೆ ಸ್ಪೂರ್ತಿ ಸಿಗುತ್ತದೆ. ಜನಸಾಮಾನ್ಯರು ಸವಿತಾ ಮಹರ್ಷಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸವಿತಾ ಸಮಾಜದ ಮುಖಂಡರಾದ ಮುನಿಕೃಷ್ಣಪ್ಪ, ಶ್ರೀನಿವಾಸ, ಶಿವಕುಮಾರ್, ಹಾಲ ನರಸಪ್ಪ. ವೆಂಕಟಪ್ಪ , ಪಟೇಲ್ ಅಶ್ವತ್ಥಪ್ಪ ಮತ್ತು ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಅಂಬರೀಷ್ ಮತ್ತು ಕಾರ್ಯದರ್ಶಿ ಉದಯ ಆರಾಧ್ಯ ಹಾಗೂ ಕುಲಭಾಂದವರು ಉಪಸ್ಥಿತರಿದ್ದರು.